ಮನರಂಜನೆ

ನಟ ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದ ರೇಣು ದೇಸಾಯಿ

ಹೈದರಾಬಾದ್,ಜೂ.29-ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಎರಡನೇ ವಿವಾಹವಾಗುತ್ತಿದ್ದಾರೆ. ಈ ವಿಚಾರವಾಗಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ರೇಣು ದೇಸಾಯಿ ಅವರಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಮತ್ತೆ ಮದುವೆಯಾದರೆ ಸಾಯಿಸ್ತೀವಿ ಅಂತ ಟ್ವಿಟ್ ಮಾಡಿದ್ದಾರೆ. ಇದರ ವಿರುದ್ಧ ರೇಣು ಈಗ ಸಿಡಿದೆದ್ದಿದ್ದಾರೆ.

ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದಿರುವ ರೇಣು ದೇಸಾಯಿ ಜಾಸ್ತಿ ಮಾತನಾಡಿದರೆ ಪವನ್ ಕಲ್ಯಾಣ್ ಅವರೊಂದಿಗೆ ವಿಚ್ಚೇದನ ಪಡೆಯಲು ಕಾರಣವೇನೆಂಬುದನ್ನು ಬಯಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನನಗೆ ನನ್ನ ಬಗ್ಗೆ ಬರುತ್ತಿರುವ ಕೆಟ್ಟ ಕಾಮೆಂಟ್ ಗಳನ್ನ ಕೇಳುವ ಅವಶ್ಯಕತೆ ನನಗಿಲ್ಲ. ಇಷ್ಟು ದಿನ ಡಿವೋರ್ಸ್ ವಿಷ್ಯವನ್ನ ಪ್ರಸ್ತಾಪ ಮಾಡಿಲ್ಲ. ಅದಕ್ಕೆ ನೀವು ನನಗೆ ಕೃತಜ್ಞತೆಯಾಗಿರಬೇಕು. ನನ್ನ ಮತ್ತು ಪವನ್ ಕಲ್ಯಾಣ್ ಅವರ ನಡುವಿನ ವಿಚ್ಛೇದನದ ಹಿಂದಿನ ಅಸಲಿ ವಿಷ್ಯವನ್ನ ಬಹಿರಂಗಪಡಿಸಿದರೆ ಪವನ್ ಕಲ್ಯಾಣ್ ಅಭಿಮಾನಿಗಳು ಗರ್ವಭಂಗ ಆಗೋದು ಖಚಿತಎಂದಿದ್ದಾರೆ. ಈ ಟ್ವಿಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೆನ್ಸಷ್ನಲ್ ಉಂಟು ಮಾಡಿದೆ.

ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ನಡುವಿನ ವಿಚ್ಚೇದನಕ್ಕೆ ನಿಜವಾದ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯದಿಂದ ಇಬ್ಬರು ದೂರುವಾದರು ಎಂಬುದಷ್ಟೇ ತಿಳಿದಿದೆ. ಆದರೆ ರೇಣು ಅವರ ಮಾತಿನಿಂದ ಅಭಿಮಾನಿಗಳಿಗೆ ಗೊತ್ತಿಲ್ಲದೇ ಇರುವುದು ಇನ್ನು ಏನೋ ಇದೆ ಎಂದು ತಿಳಿಯುತ್ತಿದೆ.

ರೇಣು ದೇಸಾಯಿ ಮೂಲತಃ ಗುಜರಾತಿನವರು. 2009 ರಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಅವರೊಂದಿಗೆ ಮದುವೆ ಆದರು. ಇವರಿಬ್ಬರ ಪ್ರೀತಿಯ ಪ್ರತಿರೂಪವಾಗಿ ಆಧ್ಯಾ ಮತ್ತು ಅಕಿರಾ ಎಂಬ ಇಬ್ಬರು ಮಕ್ಕಳಿದ್ದರು. ಆದರೆ ದಾಂಪತ್ಯದಲ್ಲಿ ಮನಸ್ತಾಪ ಮೂಡಿದ ಹಿನ್ನಲೆ 2012ರಲ್ಲಿ ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆದುಕೊಂಡರು.

ಎಂಗೇಜ್ ಆಗಿರುವ ಬಗ್ಗೆ ಫೋಟೋ ಶೇರ್ ಮಾಡಿರುವ ನಟಿ ರೇಣು ದೇಸಾಯಿ, ತಮ್ಮನ್ನ ಮದುವೆ ಆಗುತ್ತಿರುವವರಯಾರು ಎಂಬುದನ್ನ ಬಿಟ್ಟುಕೊಟ್ಟಿಲ್ಲ. ಉಂಗುರ ಬದಲಿಸುತ್ತಿರುವ ಫೋಟೋ ಮಾತ್ರ ಹಂಚಿಕೊಳ್ಳುವ ಮೂಲಕ ತಾವು ಎರಡನೇ ಮದುವೆ ಆಗುತ್ತಿದ್ದೀನಿ ಎಂದು ಖಚಿತಪಡಿಸಿದ್ದರು. ಇದಕ್ಕೆ ಪವನ್ ಕಲ್ಯಾಣ್ ಕೂಡ ಶುಭಾಶಯ ಕೋರಿದ್ದರು. ಆದರೆ ಅವರ ಅಭಿಮಾನಿಗಳು ಮಾತ್ರ ಸುಮ್ಮನಾಗಿಲ್ಲ. (ಎಂ.ಎನ್)

Leave a Reply

comments

Related Articles

error: