ದೇಶ

ನಾನು ಜಯಲಲಿತಾ ಪುತ್ರಿಯಲ್ಲ : ದಿವ್ಯಾ ರಾಮನಾಥನ್ ಸ್ಪಷ್ಟನೆ

ನಾನು ತಮಿಳುನಾಡು ಮುಖ್ಯಮಂತ್ರಿ ದಿ.ಜಯಲಲಿತಾ ಪುತ್ರಿಯಲ್ಲ ಎನ್ನುವ ಸ್ಪಷ್ಟನೆ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಫುಲ್‍ಸ್ಟಾಫ್ ಇಟ್ಟಿದ್ದಾರೆ ದಿವ್ಯಾ ರಾಮನಾಥನ್ ವೀರ ರಾಘವನ್.

ಶೇ.100ರಷ್ಟು ಜಯಲಲಿತಾರನ್ನೇ ಹೋಲುವ ಭಾವಚಿತ್ರವೊಂದು ಈಚೆಗೆ ಜಯಲಲಿತಾ ನಿಧನರಾದ ನಂತರ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವ್ಯಾಟ್ಸಾಫ್, ಟ್ವಿಟರ್ ಹಾಗೂ ಇತರೆ ತಾಣಗಳಲ್ಲಿ ಹರಿದಾಡುತ್ತಿದ್ದು, ಈಕೆ ದಿ.ಜಯಲಲಿತಾರವರ ಪುತ್ರಿಯಾಗಿದ್ದು, ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅಮ್ಮನ ನಿಧನದ ನಂತರ ತಮಿಳುನಾಡಿನ ರಾಜಕೀಯ ನೇತೃತ್ವ ವಹಿಸಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವ ಸಂದೇಶವುಳ್ಳ ಭಾವಚಿತ್ರವೂ ವೈರಲ್‍ ಆಗಿ ಹಬ್ಬಿತ್ತು.

2014ರಲ್ಲಿ ಜಯಲಲಿತಾ ಅವರು ಜೈಲು ವಾಸ ಅನುಭವಿಸುತ್ತಿದ್ದಾಗ ಈ ಸುದ್ದಿ ಗರಿಬಿಚ್ಚಿತ್ತು. ತದನಂತರ ಅವರು ನಿಧನವಾದ ಮೇಲೆ ಮತ್ತಷ್ಟು ಪುಷ್ಠಿ ಪಡೆದು ಹರಿದಾಡತೊಡಗಿತು. ನೋಡುವುದಕ್ಕೆ ಥೇಟ್ ಯೌವನಾವಸ್ಥೆಯಲ್ಲಿದ್ದ ಜಯಲಲಿತಾ ಥರ ಇರುವ ಭಾವಚಿತ್ರವನ್ನು ನೋಡಿದ ಶೇ.80ರಷ್ಟು ಮಂದಿ ಸುದ್ದಿಯನ್ನು ಸತ್ಯ ಎಂದೇ ನಂಬಿದ್ದರು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ದಿವ್ಯಾ ರಾಮನಾಥನ್ ಪೋಟೋದಲ್ಲಿರುವ ವ್ಯಕ್ತಿಯೂ ನಾನೇ ಆಗಿದ್ದರೂ, ನಾನು ಜಯಲಲಿತಾ ಅವರ ಮಗಳಲ್ಲ. ಖ್ಯಾತ ಮೃದಂಗ ವಾದಕ ವಿದ್ವಾನ್ ವಿ.ಬಾಲಾಜಿ ಅವರ ಕುಟುಂಬಕ್ಕೆ ಸೇರಿದ ನಾನು,  ನನ್ನ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿರುವೆ ಎಂದಿದ್ದಾರೆ. ಅಲ್ಲದೇ, ಸುಳ್ಳು ಸುದ್ದಿಗಳನ್ನು ಹಾಗೂ ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

 

Leave a Reply

comments

Related Articles

error: