ಮೈಸೂರು

ಪರಿಸರ ಕುರಿತ ಕಾಳಜಿ: ಗಿಡನೆಟ್ಟು ನೀರುಣಿಸಿದ ವಿದ್ಯಾರ್ಥಿಗಳು

ಮೈಸೂರಿನ ಹೆಬ್ಬಾಳದ ಪೋದಾರ್ ಇಂಟರ್‍ನ್ಯಾಷನಲ್ ಶಾಲೆಯ 5ನೇ ತರಗತಿಯ ಮಕ್ಕಳು ತಮ್ಮ ಕನ್ನಡ ಸಹಪಠ್ಯದಲ್ಲಿ ಬಂದ ಪರಿಸರ ಕಾಳಜಿಯ ಪಾಠದಿಂದ ಪ್ರೇರಿತರಾಗಿ ಬುಧವಾರದಂದು ಶಾಲಾ ಆವರಣದಲ್ಲಿ ನಾನಾ ಬಗೆಯ ಗಿಡಗಳನ್ನು ತಮ್ಮ ಮನೆಗಳಿಂದ ತಂದು ನೆಟ್ಟು ನೀರುಣಿಸಿದರು.

ಮಕ್ಕಳ ಪರಿಸರ ಕಾಳಜಿಯನ್ನು ಗಮನಿಸಿದಂತಹ ಪ್ರಾಂಶುಪಾಲ ಕೃಷ್ಣ ಬಂಗೇರ ಹಾಗೂ ಶಿಕ್ಷಕರು ತಾವೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಿದರು. ಶಿಕ್ಷಕರು ತಮ್ಮ ಜೊತೆ ಕೈಜೋಡಿಸಿದ್ದರಿಂದ ಮಕ್ಕಳು ಸಂತಸಪಟ್ಟರು. ತಮ್ಮ ಶಾಲಾ ಕಲಿಕೆ ಪೂರ್ಣಗೊಳ್ಳುವವರೆಗೂ ತಾವು ಈ ಗಿಡಗಳಿಗೆ ನೀರುಣಿಸಿ ಬೆಳೆಸುತ್ತೇವೆಂದು ಈ ಸಂದರ್ಭ ಪ್ರತಿಜ್ಞೆ ಮಾಡಿದರು.

Leave a Reply

comments

Related Articles

error: