ಕರ್ನಾಟಕ

ಶಿಲ್ಪಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಆಹ್ವಾನ

ಬೆಂಗಳೂರು (ಜೂನ್ 30): ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಪ್ರತಿ ವರ್ಷದಂತೆ 2016, 2017 ಮತ್ತು 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ಈ ಕೆಳಕಂಡ ಪ್ರಕಾರಗಳ ಶಿಲ್ಪಕಲೆಗೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ. ಪುಸ್ತಕ ವಿಮರ್ಶಕರು ಆಯ್ಕೆ ಮಾಡುವ ಒಂದು ಪುಸ್ತಕಕ್ಕೆ ಬಹುಮಾನ ನೀಡಲಾಗುವುದು.

ಬಹುಮಾನಕ್ಕೆ ಸಲ್ಲಿಸುವ ಕೃತಿಗಳು ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. 2016ನೇ ಸಾಲಿನ ಪುಸ್ತಕ ಬಹುಮಾನಕ್ಕೆ ದಿ:01-01-2015ರಿಂದ 31-12-2015ರ ಅವಧಿಯಲ್ಲಿ ಮುದ್ರಣವಾಗಿರಬೇಕು. 2017ನೇ ಸಾಲಿನ ಪುಸ್ತಕ ಬಹುಮಾನಕ್ಕೆ ದಿ:01-01-2016ರಿಂದ 31-12-2016ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. ಹಾಗೂ 2018ನೇ ಸಾಲಿನ ಪುಸ್ತಕ ಬಹುಮಾನಕ್ಕೆ ದಿ:01-01-2017 ರಿಂದ 31-12-2018ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ ಎಂದು ಮುದ್ರಿತವಾಗಿರಬೇಕು. (ಎನ್.ಬಿ)

Leave a Reply

comments

Related Articles

error: