ಕರ್ನಾಟಕ

ಗ್ಯಾಸ್ ಟ್ಯಾಂಕರ್ ಪಲ್ಟಿ: ಇಬ್ಬರಿಗೆ ಗಾಯ

ನಿಪ್ಪಾಣಿ,ಜೂ.30-ಗ್ಯಾಸ್ ಟ್ಯಾಂಕರ್ ವಾಹನವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಪಲ್ಟಿ ಆಗಿ ಗ್ಯಾಸ್ ಸೋರಿಕೆಯಾದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ತವನಿಧಿ ಬಳಿ ಶುಕ್ರವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಚಾಲಕ ರಣಜಿತ್ ಸಿಂಗ್ (40), ಕ್ಲೀನರ್ ಜಿತೇಂದ್ರ ಶರ್ಮಾ (30) ಗಾಯಗೊಂಡಿದ್ದು, ಇವರನ್ನು ಸಮೀಪದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳದ ಕೊಚ್ಚಿನ್‌ದಿಂದ ಪ್ರೋಪೋಲಿನ್‌ ಗ್ಯಾಸ್‌ ತುಂಬಿದ್ದ ಟ್ಯಾಂಕರ್‌ 3 ದಿನಗಳ ಹಿಂದೆ ಹೊರಟ್ಟಿತ್ತು. ಟ್ಯಾಂಕರ್‌ ನಿಪ್ಪಾಣಿ ತಾಲೂಕಿನ ಸ್ತವನಿಧಿ ಘಾಟ್‌ನತ್ತ ಬರುತ್ತಿದ್ದಾಗ, ಇಳಿಜಾರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಟ್ಯಾಂಕರ್‌ ಪಲ್ಟಿಯಾಗಿದೆ.

ಗ್ಯಾಸ್‌ ಸೋರಿಕೆಯಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಘಾಟ್‌ನ ಎರಡೂ ಬದಿ ಸುಮಾರು 7 ಕಿ.ಮೀ. ವರೆಗೂ ವಾಹನಗಳು ಸಾಲುಗಟ್ಟಿನಿಂತಿದ್ದವು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು, ರಾತ್ರಿ 8.30ರ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು. (ಎಂ.ಎನ್)

Leave a Reply

comments

Related Articles

error: