ಮೈಸೂರು

ಪರಿಸರ ಸ್ನೇಹಿ ಜೀವನಕ್ಕೆ ಒತ್ತು ನೀಡಬೇಕು : ಪ್ರಾಧ್ಯಾಪಕ ಕೆ.ಎ.ರವೀಶ್

ಮೈಸೂರು,ಜೂ.30:-ಪೂರ್ವಜರು ನಮಗೆ ಉಳಿಸಿದ ಭೂಮಿಯನ್ನು ನಮ್ಮ ಮುಂದಿನ ಪೀಳಿಗೆಗೂ ನಾವು ಉಳಿಸಿಹೋಗಬೇಕು. ಅದಕ್ಕಾಗಿ ಪರಿಸರ ಸ್ನೇಹಿ ಜೀವನಕ್ಕೆ ಒತ್ತು ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಸ್ಯವಿಜ್ಞಾನ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಕೆ.ಎ.ರವೀಶ್ ತಿಳಿಸಿದರು.

ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಸಂಯುಕ್ತ ಪಿಯು ಕಾಲೇಜಿನಲ್ಲಿಂದು ಪರಿಸರ ಕ್ಲಬ್ ನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ವಿಪರೀತ ಬದಲಾವಣೆ ಆಗುತ್ತಿದೆ. ಮೊದಲು ಜೂನ್ 5ಕ್ಕೆ ಮಳೆ ಆರಂಭವಾಗುತ್ತಿತ್ತು. ಈಗ ಮೇನಲ್ಲಿಯೇ ಪ್ರವಾಹ ಉಂಟಾಗುವಷ್ಟು ಮಳೆ ಬರುತ್ತಿದೆ. ಇದಕ್ಕೆಲ್ಲ ಪರಿಸರದಲ್ಲುಂಟಾಗುವ ಪ್ರಕೃತಿ ವಿಕೋಪವೇ ಕಾರಣವಾಗಿದೆ. ಮೊದಲೂ ನಾವು ವಸ್ತುಗಳನ್ನು ಉಪಯೋಗಿಸುತ್ತಿದ್ದೆವು. ಆದರೆ ಈಗ ಉಪಯೋಗಿಸುವ ವಸ್ತು ವೇಸ್ಟ್ ಮಾಡುವುದು ಜಾಸ್ತಿ ಆಗುತ್ತಿದೆ. ವೇಸ್ಟ್ ಗಳನ್ನು ಡಂಪ್ ಮಾಡುವುದು ಕೂಡ ಜಾಸ್ತಿ ಆಗುತ್ತಿದೆ. ಅವು ಕರಗೋದಕ್ಕೆ ಜಾಸ್ತಿನೇ ಸಮಯ ಹಿಡಿಯುತ್ತಿದೆ. ಈಗಿರುವ ಭೂಮಿಯನ್ನು ನಾವು ಉಳಿಸಿಕೊಳ್ಳಬೇಕು. ಇದನ್ನು ನಮಗೆ ಹಿರಿಯರು ಬಿಟ್ಟು ಹೋಗಿದ್ದಾರೆ. ನಾವು ನಮ್ಮ ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಹೋಗಬೇಕು. ಈಗಾಗಲೇ ಮತ್ತೆಲ್ಲಿ ಜಾಗ ಇದೆ ಎಂದು ಮನುಷ್ಯ ಹುಡುಕಲು ಆರಂಭಿಸಿದ್ದಾನೆ, ಚಂದ್ರನಲ್ಲಿ, ಇತರ ಗ್ರಹಗಳಲ್ಲಿ ಜಾಗವಿದೆಯೇ ಎಂದು ಹುಡುಕಾಡಲಾರಂಭಿಸಿದ್ದಾನೆ. ಅಲ್ಲೆಲ್ಲಾ ಜಾಗ ಸಿಕ್ಕರೆ ಇನ್ನೇನು ಹಾಳು ಮಾಡುತ್ತೇವೋ ಗೊತ್ತಿಲ್ಲ ಎಂದರು. ಪರಿಸರವನ್ನು ಉಳಿಸಲು ಪರಿಸರ ಸ್ನೇಹಿ ಬದುಕಿಗೆ ಹೆಚ್ಚು ಒತ್ತು ನೀಡಿ ಎಂದು ತಿಳಿಸಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಸತ್ಯಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: