ಮೈಸೂರು

ವಿಚಾರವಾದಿಗಳಾದ ಪ್ರೊ.ಕೆ.ಎಸ್.ಭಗವಾನ್ ರ ಕೊಲೆ ಸಂಚನ್ನು ಖಂಡಿಸಿ ಪ್ರತಿಭಟನೆ : ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯ

ಮೈಸೂರು,ಜೂ.30:- ವಿಚಾರವಾದಿಗಳಾದ ಎಂ.ಎಂ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಘೋರ ಹತ್ಯೆಗಳನ್ನು ಖಮಡಿಸಿ ಮತ್ತು ಮೈಸೂರಿನ ವಿಚಾರವಾದಿಗಳಾದ ಪ್ರೊ.ಕೆ.ಎಸ್.ಭಗವಾನ್ ರ ಕೊಲೆ ಸಂಚನ್ನು ಖಂಡಿಸಿ, ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿ ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರಿನ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ರು ಸಾಹಿತ್ಯದ ಮೂಲಕ ಅವರ ವಿಚಾರ ಧಾರೆಗಳ ಮೂಲಕ ಶೋಷಿತ ಸಮುದಾಯಗಳ ಮೇಲೆ ಶತಶತಮಾನಗಳಿಂದ ಇಂದಿಗೂ ನಡೆಯುತ್ತಿರುವ ದೇವರು ಮತ್ತು ಧರ್ಮದ ಶೋಷಣೆಯ ವಿರುದ್ಧ ಧ್ವನಿಯೆತ್ತಿ ಶೋಷಿತ ಸಮುದಾಯಗಳಿಗೆ ಸತ್ಯವನ್ನು ಹೇಳಿ ಜಾಗೃತಿಗೊಳಿಸುತ್ತಿದ್ದು ಕೋಮು ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸತ್ಯ ಹೇಳುವ ಪ್ರಗತಿಪರ ಚಿಂತಕರನ್ನು ಗುರಿಯಾಗಿಟ್ಟುಕೊಂಡು ಕೊಲೆಗೆ ಸಂಚು ರೂಪಿಸುವುದೇ ಆದರೆ ದಲಿತ ಸಮಾಜವು ಅಹಿಂಸಾ ಮಾರ್ಗವನ್ನು ತೊರೆದು ಹಿಂಸೆಯ ಮಾರ್ಗವನ್ನು ಕೂಡ ಆಲೋಚಿಸಬೇಕಾಗುತ್ತದೆ ಎಮದು ಎಚ್ಚರಿಸಿದರು. ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಶೋಷಿತ ಸಮುದಾಯಗಳ ಮೇಲೆ ಕೋಮು ಶಕ್ತಿಗಳು ದಾಳಿ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಂಚುಕೋರರಿಗೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ನಿಂಗರಾಜ್ ಮಲ್ಲಾಡಿ, ಹೆಚ್.ಬಿ.ದಿವಾಕರ್, ಕಾರ್ಯ ಬಸವಣ್ಣ, ದೊಡ್ಡಸಿದ್ದು ಹಾದನೂರು, ಸೋಮಣ್ಣ ಬನ್ನಹಳ್ಳಿ, ಪುಟ್ಟಲಕ್ಷ್ಮಮ್ಮ, ಚಾಮರಾಜು ಇಲವಾಲ, ಕೆ.ನಂಜಪ್ಪ, ಶಿವಕುಮಾರ್, ಬಸವರಾಜು, ಚಂದ್ರಶೇಖರ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: