ಮೈಸೂರು

ಅಕ್ರಮವಾಗಿ ವಸೂಲು ಮಾಡಿದ ಹಣ ಹಿಂದಿರುಗಿಸಿ: ಪ್ರತಿಭಟನೆ

ಪಿರಿಯಾಪಟ್ಟಣದಲ್ಲಿ ಅನಧಿಕೃತ ಸಿಬಿಎಸ್ ಇ ತರಗತಿಗಳನ್ನು ತೆರೆದು ಪೋಷಕರಿಗೆ ವಂಚನೆ ಮಾಡುತ್ತಿರುವುದನ್ನು ವಿರೋಧಿಸಿ ಪೋಷಕರು ಮತ್ತು ಸಾರ್ವಜನಿಕರು ಬುಧವಾರ ಧರಣಿ ಸತ್ಯಾಗ್ರಹ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಸೈಂಟ್ ಥಾಮಸ್ ಎಜುಕೇಷನ್ ಸೊಸೈಟಿ ವತಿಯಿಂದ ನಡೆಯುತ್ತಿರುವ ಪುಷ್ಪವಿದ್ಯಾಸಂಸ್ಥೆಯವರು ಪುಷ್ಪಪಬ್ಲಿಕ್ ಶಾಲೆಯನ್ನು ತೆರೆಯಲು ಶಿಕ್ಷಣ ಇಲಾಖೆಯಿಂದ ಕೇವಲ ಎನ್ ಓಸಿಯನ್ನು ಪಡೆದುಕೊಂಡಿದ್ದಾರೆ. ಇದನ್ನೇ ಅನುಮತಿ ಪತ್ರ ಎಂದು ಪೋಷಕರನ್ನು ನಂಬಿಸಿ ಸಿಬಿಎಸ್ ಇ ಮಂಡಳಿಯಿಂದ ಅನುಮೋದನೆ ಪಡೆಯದೇ ಎಲ್ ಕೆಜಿಯಿಂದ 5ನೇ ತರಗತಿಯವರೆಗೆ 343 ಮಕ್ಕಳನ್ನು ಅನಧಿಕೃತವಾಗಿ ದಾಖಲು ಮಾಡಿಕೊಂಡು ಕೋಟ್ಯಾಂತರ ರೂ. ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಅಕ್ರಮವಾಗಿ ನಡೆಸುತ್ತಿರುವ ಸಂಸ್ಥೆಯನ್ನು ಮುಚ್ಚಬೇಕು. ಮತ್ತು ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ವಸೂಲಿ ಮಾಡಿರುವ ಹಣವನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿ ಈ ಹಿಂದೆಯೇ ಶಿಕ್ಷಣ ಸಚಿವರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು. ಮಹಾ ವಂಚನೆಯನ್ನು ಬಯಲಿಗೆ ತಂದು ಪೋಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿ.ಕೆ. ಸೋಹನ್ ಕುಮಾರ್ ಸೇರಿದಂತೆ ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

comments

Related Articles

error: