ಕ್ರೀಡೆ

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಧೋನಿಯ ನಡೆ

ಡಬ್ಲಿನ್,ಜೂ.30-ಕ್ಯಾಪ್ಟನ್ ಕೂಲ್ ಎಂದೇ ಪ್ರಖ್ಯಾತಿ ಪಡೆದಿರುವ ಕ್ರಿಕೆಟಿಗ ಎಂ.ಎಸ್.ಧೋನಿ ಆಗಾಗ ತಮ್ಮ ಸರಳತೆಯಿಂದಲೂ ಹೆಸರು ಮಾಡುತ್ತಿರುತ್ತಾರೆ. ಇದೀಗ ಧೋನಿ ಅವರ ಮತ್ತೊಂದು ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಧೋನಿ ವಾಟರ್ ಬಾಯ್ ಆಗಿ ತಮ್ಮ ಸಹ ಆಟಗಾರರಿಗೆ ಡ್ರಿಂಕ್ಸ್ ಪೂರೈಕೆ ಮಾಡುವ ಮೂಲಕ ಧೋನಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ.

ಐರ್ಲೆಂಟ್ ವಿರುದ್ಧದ ದ್ವಿತೀಯ ಟಿ-20 ಪಂದ್ಯದಲ್ಲಿ ಧೋನಿ ಆಡಲಿಲ್ಲ. ಧೋನಿ ಡಗೌಟ್ ನಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ಎಂ.ಎಸ್.ಧೋನಿ ಮೈದಾನದಲ್ಲಿ ಪ್ರತ್ಯಕ್ಷರಾದರು. ಆದರೆ ಈ ಬಾರಿ ಧೋನಿ ವಾಟರ್ ಬಾಯ್ ಆಗಿ ಕಾಣಿಸಿಕೊಂಡರು. ಧೋನಿ ಸ್ವ ಇಚ್ಛೆಯಿಂದ ದೊಡ್ಡ ಬ್ಯಾಗ್ ಹಿಡಿದು ಮೈದಾನಕ್ಕಿಳಿದು ಸುರೇಶ್ ರೈನಾ ಹಾಗೂ ಕೆ.ಎಲ್.ರಾಹುಲ್ ನೀರು ನೀಡಿದರು.

ಐಸಿಸಿಯ ಮೂರು ಟ್ರೋಫಿ ಗೆದ್ದ ಏಕೈಕ ನಾಯಕ ಎಂ.ಎಸ್.ಧೋನಿ. ಆದರೆ ಧೋನಿ ಅದೆಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಸರಳೆಯನ್ನು ಹಾಗೆ ಮುಂದುವರಿಸಿಕೊಂಡು ಬಂದಿದ್ದಾರೆ.

ಈ ಪಂದ್ಯದಲ್ಲಿ ಭಾರತ 213 ರನ್ ಸಿಡಿಸಿತ್ತು. ಇಷ್ಟೇ ಅಲ್ಲ 143 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. 2 ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಭಾರತ ಸರಣಿ ವಶಪಡಿಸಿಕೊಂಡಿದೆ.

1991ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಅಂದು ತಮ್ಮ ಸಹ ಆಟಗಾರರಿಗೆ ನೀರು ಕೊಡಲು ತಂಡದ ವ್ಯವಸ್ಥಾಪಕರು ಹೇಳಿದಾಗ ಡ್ರಿಂಕ್ಸ್ ತೆಗೆದುಕೊಂಡು ಹೋಗಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದರು. ಇದು ಕೋಚ್ ಹಾಗೂ ವ್ಯವಸ್ಥಾಪಕರ ಕೆಂಗಣ್ಣಿಗೂ ಸಹ ಗುರಿಯಾಗಿತ್ತು. (ಎಂ.ಎನ್)

Leave a Reply

comments

Related Articles

error: