ಮೈಸೂರು

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ವಿಮಾ ಅವಧಿ ವಿಸ್ತರಣೆ

ಮೈಸೂರು.ಜೂ.30 :  ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ವಿಮಾ ಅವಧಿಯನ್ನು ಜು.31 ವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 3,89,027 ಫಲಾನುಭವಿಗಳನ್ನು 2014-15 ಸಾಲಿನಲ್ಲಿ ನೋಂದಣೆಯನ್ನು ಮಾಡಲಾಗಿತ್ತು. ಈ ಎಲ್ಲಾ ನೋಂದಾಯಿತ ಫಲಾನುಭವಿಗಳು ಎಂದಿನಂತೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಸ್ಮಾರ್ಟ್ ಕಾರ್ಡ್‍ಗಳನ್ನು ಈ ಯೋಜನೆಯಡಿ ನೋದಾಯಿತÀ ಎಲ್ಲಾ ಆಸ್ವತ್ರೆಗಳಲ್ಲಿ ಉಪಯೋಗಿಸಲು ಅರ್ಹರಾಗಿರುತ್ತಾರೆ.
ಈ ಕುರಿತು ಯಾವುದೇ ಕುಂದು ಕೊರತೆಗಳಿಗಾಗಿ ಜಿಲ್ಲಾ ಸಂಯೋಜಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,  ಮೈಸೂರು, ಮೊಬೈಲ್ ಸಂಖ್ಯೆ: 7259003400, ಮತ್ತು ಆಯಾ ತಾಲ್ಲೂಕಿನ ಆರೋಗ್ಯ ಮಿತ್ರರು, , ನಂಜನಗೂಡು 7259003412, ಟಿ.ನರಸಿಪುರ 7259003415, ಕೆ.ಆರ್.ನಗರ 8496012268, ಪಿರಿಯಪಟ್ಟಣ 7259003424, ಹುಣಸೂರು 7259003381, ಹೆಚ್.ಡಿ.ಕೋಟೆ 7259003420,  ಬನ್ನೂರು 7259003417, ಮೂಗೂರು 7259003418, ತಲಾಕಾಡು7259003416, ಹುಲ್ಲಹಳ್ಳಿ 7259003413, ಸಾಲಿಗ್ರಾಮ 7259003423, ಜಯಪುರ 7259003409 ಹಾಗೂ ಆಶಾ ಕಾರ್ಯಕರ್ತೆಯರು ಇವರಿಂದ ಮಾಹಿತಿ ಪಡೆಯಬಹುದಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  (ಕೆ.ಎಂ.ಆರ್)

Leave a Reply

comments

Related Articles

error: