ಸುದ್ದಿ ಸಂಕ್ಷಿಪ್ತ

ಸಹಕಾರ ಸಂಘ ನೋಂದಣಿ ರದ್ದು: ಆಕ್ಷೇಪಣೆಗಳಿದ್ದರೆ ಸಲ್ಲಿಸಿ      

ಮೈಸೂರು, ಜೂ,30 : ಮೈಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯವ್ಯಾಪ್ತಿಯಲ್ಲಿರುವ ಶ್ರೀ ವಿನಾಯಕ ಪತ್ತಿನ ಸಹಕಾರ ಸಂಘ ನಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ ಹಾಗೂ ನಿಯಮಗಳು 1960 ಮತ್ತು ಸಂಘಗಳ ಬೈಲಾ ರೀತ್ಯಾ ಕಾರ್ಯಚಟುವಟಿಕೆ ನಡೆಸದೇ ಇದ್ದುದರಿಂದ ಈಗಾಗಲೇ ಸಮಾಪನೆಗೊಳಿಸಿ ಸಮಾಪನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ಸಂಘಗಳಿಗೆ ಸಮಾಪನಾ ಆದೇಶ ಹೊರಡಿಸಿ ಅನೇಕ ವರ್ಷಗಳಾಗಿದ್ದರೂ ಸಹ ಈವರೆಗೂ ಸಂಘವನ್ನು ಪುನಶ್ಚೇತನಗೊಳಿಸಲು ಸಂಘದ ಸದಸ್ಯರುಗಳಿಗಾಗಲಿ / ಸಾರ್ವಜನಿಕರಿಗಾಗಲಿ ಯಾವುದೇ ಮನವಿ ಅಹವಾಲುಗಳು ಬಾರದ ಕಾರಣ ಹಾಗೂ ಪ್ರಸ್ತುತ ಸಂಘದ ಸದಸ್ಯರುಗಳಿಗೆ ಯಾವುದೇ ಪ್ರಯೋಜನ / ಸೇವೆ ದೊರೆಯದ ಕಾರಣ ಈ ಸಂಘಗಳ ನೊಂದಣಿ / ರದ್ದುಗೊಳಿಸಲು ಕ್ರಮಕೈಗೊಳ್ಳಲಾಗಿದೆ.
ಸಂಘದ ಸದಸ್ಯರ ಹಿತದೃಷ್ಠಿಯಿಂದ ಸಂಘವನ್ನು ಪುನಶ್ಚೇತನಗೊಳಿಸಿ ಮುನ್ನಡೆಸುವ ಬಗ್ಗೆ ಸಂಘದ ಸದಸ್ಯರುಗಳು / ಸಾರ್ವಜನಿಕರು ಆಸಕ್ತ ಹೊಂದಿದ್ದಲ್ಲಿ ಅಥವಾ ರದ್ದುಗೊಳಿಸುವ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿವಸಗಳೊಳಗಾಗಿ ಈ ಕಛೇರಿಗೆ ಖುದ್ದು ಹಾಜರಾಗಿ ಲಿಖಿತ ಮನವಿಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮೈಸೂರು ಉಪವಿಭಾಗ ಮೈಸೂರು ಇವರಿಗೆ ಸಲ್ಲಿಸುವುದು. (ಕೆ.ಎಂ.ಆರ್)

Leave a Reply

comments

Related Articles

error: