ಮೈಸೂರು

ಕಮಲಾ ಕರಿಕಾಳನ್ ಅವರನ್ನು ವರ್ಗಾಯಿಸಲು ಒತ್ತಾಯ : ಪ್ರತಿಭಟನೆ

ಶ್ರೀಜಯಚಾಮರಾಜೇಂದ್ರ ಮೃಗಾಲಯ ದಬ್ಬಾಳಿಕೆ, ದೌರ್ಜನ್ಯ ಹಾಗೂ ಪ್ರಾಣಿಗಳ ಸರಣಿ ಸಾವಿಗೆ ಕಾರಣಕರ್ತ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ,ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳ, ನೌಕರರ ಪರಿಷತ್ ವತಿಯಿಂದ ಬುಧವಾರ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಕಮಲಾ ಕರಿಕಾಳನ್ ಅವರಿಗೆ ಜವಾಬ್ದಾರಿ ನಿರ್ವಹಿಸುವ ದಕ್ಷತೆ ಇಲ್ಲ. ಇಂತಹ ಅಧಿಕಾರಿಯಿಂದ ಮೈಸೂರಿನ ಮೃಗಾಲಯದ ಹಿರಿಮೆಗೆ ಧಕ್ಕೆಯುಂಟಾಗಲಿದೆ. ಅಮಾಯಕ ನೌಕರರು ವಿನಾಕಾರಣ ತೊಂದರೆ ಅನುಭವಿಸುವ ಪರಿಸ್ಥಿತಿಗೆ ತುತ್ತಾಗಬೇಕಾಗುತ್ತದೆ ಎಂದು ಆರೋಪಿಸಿದರು.

ಮೃಗಾಲಯದಲ್ಲಿ ನಡೆಯುವ ಸರಣಿ ಸಾವನ್ನು ತಪ್ಪಿಸಲು ಕಮಲ ಅವರನ್ನು ಕೂಡಲೇ ವರ್ಗಾಯಿಸಿ, ಬೇರೊಬ್ಬ ಅನುಭವಿ, ದಕ್ಷ ಹಾಗೂ ಸೃಜನಶೀಲ ಭಾವನೆ ಹೊಂದಿರುವವರನ್ನು ನೇಮಿಸಿ ಇತಿಹಾಸ ಪ್ರಸಿದ್ಧ ಮೃಗಾಲಯ ಉಳಿಸಿ. ಅಮಾಯಕ ನೌಕರ ವರ್ಗಕ್ಕೆ ನೈಸರ್ಗಿಕ ನ್ಯಾಯ ಒದಗಿಸಿ, ಅಮಾನತುಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

Leave a Reply

comments

Related Articles

error: