ಸುದ್ದಿ ಸಂಕ್ಷಿಪ್ತ

ಜುಲೈ 8 ರಂದು ಸಾರ್ವಜನಿಕ ಅಹವಾಲು ಸಭೆ  

ಮೈಸೂರು, ಜೂ,30 : ಮೈಸೂರು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಕಳಸ್ತವಾಡಿ ಗ್ರಾಮದ ವರೆಗೆ 131.068 ನೇ ಸರಪಳಿಯಿಂದ 135.304 ನೇ ಸರಪಳಿವರೆಗೆ ಒಟ್ಟು 4.236 ಕಿಲೋಮೀಟರ್‍ ಗಳು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275 ರ ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಎಡ ಮತ್ತು ಬಲಗಳಲ್ಲಿ ಪ್ರಸ್ತುತ ಇರುವ ವಿವಿಧ ಜಾತಿಯ 209 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣ 8(3) ರಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದಲ್ಲಿ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಜುಲೈ.8. ರಂದು ಅಪರಾಹ್ನ 3.00 ಗಂಟೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವಿಭಾಗರವರ ಕಛೇರಿ, ಅರಣ್ಯ ಭವನ, 6ನೇ ಕ್ರಾಸ್, ಅಶೋಕಪುರಂ, ಮೈಸೂರು  ಇಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದೆ.
ಸಾರ್ವಜನಿಕರು ನಿಗಧಿತ ಸಮಯಕ್ಕೆ ಹಾಜರಾಗಿ ಮರಗಳನ್ನು ತೆರೆವುಗೊಳಿಸುವ ವಿಚಾರದಲ್ಲಿ ಸಲಹೆ/ಸೂಚನೆ ಮತ್ತು ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಅಥವಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವಿಭಾಗ, ಮೈಸೂರು. ಅರಣ್ಯ ಭವನ, 1ನೇ ಮಹಡಿ, ಅಶೋಕಪುರಂ, 6ನೇ ಕ್ರಾಸ್, ಮೈಸೂರು-570008 ಇಲ್ಲಿಗೆ  ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: