ಕರ್ನಾಟಕ

ಮಟ್ಕಾ ದಂಧೆ ಹಾವಳಿ: ಪಾವಗಡ ಉಳಿಸಿ ಅಭಿಯಾನ ಆಂಭಿಸಿದ ಸ್ಥಳೀಯ ಯುವಕರು

ತುಮಕೂರು (ಜೂನ್ 30): ಪಾವಗಡದಲ್ಲಿ ಮಿತಿಮೀರಿದ ಮಟ್ಕಾ ದಂಧೆಯನ್ನು ತಡೆಗಟ್ಟಲು ಯುವಕರು ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.

ಜಿಲ್ಲೆಯ ಪಾವಗಡ ತಾಲೂಕಿನ ಪ್ರೇಕ್ಷಣಿಯ ಸ್ಥಳವಾಗಿದ್ದು, ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಪಾವಗಡದಲ್ಲಿ ಸ್ಥಳೀಯರು ಮತ್ತು ಇತರೆ ಪ್ರದೇಶದಿಂದ ಬಂದು ಜನರು ಮಟ್ಕಾ ದಂದೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಟ್ಕಾ ದಂಧೆ ಹೆಚ್ಚಾಗಿದ್ದರಿಂದ ಯುವಕರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ಒಂದು ವಾರದಿಂದಲೇ ಈ ಅಭಿಯಾನವನ್ನು ಸ್ಥಳೀಯರು ಯುವಕರು ಶುರು ಮಾಡಿದ್ದು, ಈಗಾಲೇ ಅಭಿಮಾನದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಯುವಕರು ಮಟ್ಕಾ ದಂಧೆಯನ್ನು ನಿಲ್ಲಿಸಬೇಕು ಪೋಸ್ಟ್ ಗಳಲ್ಲಿ ಬಿತ್ತರಿಸಲಾಗುತ್ತಿದೆ. (ಎನ್.ಬಿ)

Leave a Reply

comments

Related Articles

error: