ಮೈಸೂರು

ಕಣ್ಣಿನ ತಪಾಸಣೆಗೊಳಗಾದ ಪತ್ರಕರ್ತರು ಹಾಗೂ ಕುಟುಂಬ ವರ್ಗದವರು

ಇತ್ತೀಚಿನ ಜೀವನ ಶೈಲಿಯ ಬದಲಾವಣೆ, ಮೊಬೈಲ್, ಟಿ.ವಿ.ಲ್ಯಾಪ್‍ಟ್ಯಾಪ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಪರಿಕರಗಳಿಂದ ಹೊಮ್ಮುವ ಎಲೆಕ್ಟ್ರೋ ರೇಡಿಯೇಷನ್‍ನಿಂದ ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದ್ದು ಇದರಿಂದ ಕಣ್ಣಿನ ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ನೇತ್ರ ತಜ್ಞ ವೈದ್ಯ ಡಾ.ಶ್ರೀನಿವಾಸಮೂರ್ತಿ ತಿಳಿಸಿದರು.

ಅವರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಭಗವಾನ್ ಮಹಾವೀರ್‍ ಪಾಲಿ ಕ್ಲಿನಿಕ್ ಸಹಯೋಗದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿರುವ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ‘ಸಿಟಿಟುಡೆ’ಯೊಂದಿಗೆ ಮಾತನಾಡಿ ಶಿಬಿರದಲ್ಲಿ ಕಣ್ಣಿನ ಪರೀಕ್ಷೆ, ದೃಷ್ಟಿದೋಷ ಕಾಯಿಲೆಗೆ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಪತ್ರಕರ್ತರಿಗೆ ಶೇ.35ರಷ್ಟು ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು, ಔಷಧವನ್ನು ವಿತರಿಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯ ಇರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಶಿಬಿರದಲ್ಲಿ ತಪಾಸಣೆಗೊಳಗಾದವರಿಗೆ ಶಸ್ತ್ರ ಚಿಕಿತ್ಸೆಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.

index-2ಟಿವಿ, ಮೊಬೈಲ್ ನೋಡುವಾಗ ಕಣ್ಣನ್ನು ಪದೇ ಪದೇ ಮಿಟುಕಿಸದೇ ಇರುವುದರಿಂದ ಕಣ್ಣಿನಲ್ಲಿನ ತೇವಾಂಶ ಕಡಿಮೆಯಾಗಿ ಸಮಸ್ಯೆಗಳು ಹೆಚ್ಚಾಗುವುದು. ಆದ್ದರಿಂದ ದೃಷ್ಟಿಸಿ ನೋಡುವುದು ಕಣ್ಣಿನ ಆರೋಗ್ಯಕ್ಕೆ ಮಾರಕ. ಕಣ್ಣಿನ ನೈಸರ್ಗಿಕ ತೇವಾಂಶ ಕಡಿಮೆಯಾಗದಂತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಬಿರವನ್ನು ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದು ಮೊದಲನೆ ದಿನ ಶೇ.35ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಕುಟುಂಬ ವರ್ಗದವರು ಸದುಪಯೋಗಪಡಿಸಿಕೊಂಡರು.

ಉದ್ಘಾಟನೆ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಉಪಾಧ್ಯಕ್ಷ ಕೆ.ಜೆ.ರಮೇಶ್‍ ಬಾಬು ಉಪಸ್ಥಿತರಿದ್ದರು.

ಶಿಬಿರದಲ್ಲಿ ಭಗವಾನ್ ಮಹಾವೀರ್ ಪಾಲಿ ಕ್ಲಿನಿಕ್‍ನ ಅಪ್ಟಮಿಸ್ಟ್‍ಗಳಾದ ಭವಾನಿ, ಪ್ರಸನ್ನ.ಎ.ಟಿ, ಶೃತಿ, ಪವನ್, ಯೂನಸ್, ಸುಭಾಷ್, ಶಿಬಿರದ ಆಯೋಜಕ ಮಹೇಂದ್ರ ಉಪಸ್ಥಿತರಿದ್ದು ಸೇವೆ ನೀಡಿದರು.

 

 

Leave a Reply

comments

Related Articles

error: