ಮೈಸೂರು

ಪ್ರಪಂಚದಲ್ಲಿ ಯಾವ ವಿಚಾರವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ : ಗೋ.ಮಧುಸೂದನ್ ಅಭಿಮತ

ಮೈಸೂರು,ಜು.2:- ಪ್ರಪಂಚದಲ್ಲಿ ಯಾವ ವಿಚಾರವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ ಎಂದು ಚಿಂತಕ, ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅಭಿಪ್ರಾಯಪಟ್ಟರು.

ಕಲಾಮಂದಿರದ ಕಿರಿರಂಗಮಂದಿರದಲ್ಲಿಂದು ಚಾರ್ವಾಕ ಕಥಾನಾಟಕೋತ್ಸವ 2018ರ ಪ್ರಯುಕ್ತ ಆಯೋಜಿಸಲಾದ ವೈಚಾರಿಕ ಚಿಂತನೆ ಮತ್ತು ಚಿಂತಕರ ಕಗ್ಗೊಲೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಪಂಚದ ಇತಿಹಾಸವನ್ನು ಗಮನಿಸಿದರೆಯಾವ ವಿಚಾರವನ್ನು ಯಾರೂ ಕೊಲ್ಲುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ವಿಚಾರಗಳು ಜೀವಂತಿಕೆ ಪ್ರಸ್ತುತತೆಯಿಂದ ಮಾತ್ರ ಸಾಧ್ಯ. ಅಪಸ್ರಸ್ತುತವಾದರೆ ಅಳಿಸಿಹೋಗತ್ತೆ. ಯಾರೂ ಯಾವ ವಿಚಾರವನ್ನೂ ಕೊಲ್ಲಲು ಸಾಧ್ಯವಿಲ್ಲ. ನಾವು ಹೇಳುವ ವಿಚಾರ ಇಂದಿನ ಮಾನಸಿಕತೆಗೆ ಪ್ರಸ್ತುತ. ಯಾವುದೇ ವಿಚಾರವನ್ನು ಪ್ರತಿಪಾದನೆ ಮಾಡುವ ಚಿಂತಕನನ್ನು ಕೊಲ್ಲುತ್ತೇನೆ ಎಂದು ವಿಚಾರ ಮಾಡಿದರೆ ಅವನೊಬ್ಬ ಮೂರ್ಖ. ಯಾವುದೇ ವಿಚಾರವನ್ನು ಸ್ವೀಕರಿಸುವ, ತಿರಸ್ಕರಿಸುವ ಸ್ವಾತಂತ್ರ್ಯ ನಮ್ಮ ದೇಶದಲ್ಲಿದೆ ಎಂದರು. ಚಾರ್ವಾಕ ಭಾರತ ಕಂಡ ಮೊಟ್ಟ ಮೊದಲ ವಿಚಾರವಾದಿ ಚಾರು ಅಂದರೆ ಸುಂದರ್, ವಾಕ್ ಅಂದೆ ಮಾತು. ಚಾರುವಾಕ್ ಎಂದರೆ ಸುಂದರ ಕಲ್ಪನೆ ಎಂದು ತಿಳಿಸಿದರು. ವೈಚಾರಿಕತೆಯನ್ನು ಪ್ರಕಟಮಾಡುವವ ಚಿಂತಕ. ಋಷಿ ಎಂದರೆ 24*7ಸಮಾಜದ ಒಳಿಗೆ ಚಿಂತನೆ ಮಾಡುವವನು. ಯಾರು ಪ್ರಪಂಚವನ್ನು ಉಳಿಸುವ ಕುರಿತು ಚಿಂತನೆ ಮಾಡುತ್ತಾನೋ ಅವನು ಋಷಿ. ಪೂಜೆ,ದೇವತಾರಾಧನೆ, ಮಂಗಳಾರತಿ ಇಲ್ಲ. ಚಾರ್ವಾಕ ಒಂದು ಮಾತನ್ನು ಹೇಳಿದರು. ಈ ಶರೀರ ಭಸ್ಮವಾಗುತ್ತದೆ. ಆದ್ದರಿಂದ ಇರುವಷ್ಟು ಸುಖ, ಸಂತೋಷಕ್ಕಾಗಿ  ಏನಾದರೂ ಮಾಡು ಎಂದಿದ್ದಾರೆ ಎಂದು ತಿಳಿಸಿದರು. ಮನುಷ್ಯನಿಗೆ ಹುಟ್ಟು ಸಾವು ಹೇಳಿಕೇಳಿ ಬರುವುದಿಲ್ಲ. ಯಾರೂ ಅರ್ಜಿ ಹಾಕಿ ಹುಟ್ಟಿರಲ್ಲ. ಅವೆಲ್ಲ ಆಕಸ್ಮಿಕ. ಪ್ರತಿಯೊಂದು ಪ್ರಾಣಿಗೂ ಪ್ರಭಾವಳಿಯಿದೆ. ಆತ್ಮದ ಪ್ರಭೆ, ಆತ್ಮ ಜ್ಯೋತಿಯ ಸ್ವರೂಪ. ನಾವು ಎಲ್ಲ ಕಾರ್ಯಕ್ರಮಗಳಲ್ಲಿ ಜ್ಯೋತಿ ಬೆಳಗುತ್ತೇವೆ. ಜ್ಯೋತಿಯ ಬೆಳಕು ಆತ್ಮದ ಕಲ್ಪನೆಯನ್ನು ತಂದುಕೊಡುತ್ತದೆ. ‘ಸಾ ವಿದ್ಯಾಯಾ ವಿಮುಕ್ತಯೇ’ ಎಂಬುದನ್ನು ನಂಬಿದ್ದೇವೆ. ವಿದೇಶಿಯರೂ ಕೂಡ ಭಾರತಕ್ಕೆ ಬರುವುದು ಭಾರತದಲ್ಲಿನ ಆಧ್ಯಾತ್ಮ ಚಿಂತನೆಯನ್ನು ಅಧ್ಯಯನ ಮಾಡಲಿಕ್ಕಾಗಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಚಾರವಾದಿ ಪ್ರೊ.ಕಾಳೇಗೌಡ ನಾಗವಾರ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಚ್ಛನ್ಯಾಯಾಲಯದ ನ್ಯಾಯವಾದಿ ಹೆಚ್.ಮೋಹನ್ ಕುಮಾರ್, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಸಿ.ಕೆ.ಮಹೇಂದ್ರ, ಪರಿವರ್ತನ ಪತ್ರಿಕೆಯ ಸಂಪಾದಕ ಡಾ.ಕೃಷ್ಣಮೂರ್ತಿ ಚಮರಂ, ವಿಚಾರವಾದಿ ಮಲ್ಕುಂಡಿ ಮಹದೇವಸ್ವಾಮಿ ಪಾಲ್ಗೊಂಡಿದ್ದರು. ಚಾರ್ವಾಕ ಸಂಸ್ಥೆಯ ಅದ್ಯಕ್ಷ ಗಿರೀಶ್ ಮಾಚಳ್ಳಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: