ಮೈಸೂರು

ಅಕ್ರಮ ಸಂಬಂಧ ಆರೋಪ: ತಾಯಿ-ಮಗಳ ಕೊಲೆ

ಅಕ್ರಮ ಸಂಬಂಧವಿರುವ ಬಗ್ಗೆ ಶಂಕಿಸಿ ಪೂಜಾರಿಯೋರ್ವ ತಾಯಿ ಮಗಳನ್ನ ಕೊಂದು ಬಾವಿಗೆ ಎಸೆದ ಘಟನೆ ಮೈಸೂರು ಸಮೀಪದ ಉತ್ತನಹಳ್ಳಿಯಲ್ಲಿ ನಡೆದಿದೆ.

ಕೊಲೆಯಾದವರನ್ನು ಸವಿತಾ ಹಾಗೂ ಆಕೆಯ ಮಗಳು ಕೀರ್ತನ ಎಂದು ಗುರುತಿಸಲಾಗಿದೆ. ಉತ್ತನಹಳ್ಳಿಯ ಶನಿದೇವರಗುಡ್ಡಪ್ಪ ಮಹೇಶ ಕೊಲೆಗೈದ ಆರೋಪಿ. ಈ ಹಿಂದೆ ಆರೋಪಿ ಮಹೇಶ್, ಸವಿತಾ ಬಳಿ ಚಿನ್ನ ಹಾಗೂ ಹಣವನ್ನು ಸಾಲ ಪಡೆದಿದ್ದ ಎನ್ನಲಾಗಿದೆ. ಈ ಹಣ ಮತ್ತು ಚಿನ್ನವನ್ನು ವಾಪಸ್ ಕೇಳಿದ್ದಕ್ಕೆ ತಾಯಿಮಗಳನ್ನು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಮೈಸೂರು ತಾಲೂಕು ಉತ್ತನಹಳ್ಳಿಯ ಸವಿತಾಳನ್ನು ಕೀಳನಪುರಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಆದರೆ ಅಕ್ರಮ ಸಂಬಂಧವಿದ್ದ ಕಾರಣ ಮತ್ತೆ ಉತ್ತನಹಳ್ಳಿಗೆ ಸವಿತಾಳನ್ನು ಕರೆತಂದಿದ್ದ ಪೂಜಾರಿ ಮಹೇಶ, ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಜಗಳ ತೆಗೆದಿದ್ದ ಎನ್ನಲಾಗಿದೆ. ಬಳಿಕ ಪೂಜಾರಿ ಮಹೇಶ ಉತ್ತನಹಳ್ಳಿ ತೋಟವೊಂದರಲ್ಲಿ ತಾಯಿ ಮಗಳನ್ನ ಹೊಡೆದು ಬಾವಿಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹೇಶನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply

comments

Related Articles

error: