ಮನರಂಜನೆ

`ದಿ ವಿಲನ್’ ಟೀಸರ್ ನೋಡಿದ ನಟಿ ಶಾನ್ವಿ ಟ್ವಿಟ್ ಮಾಡಿದ್ದೇನು.?

ಬೆಂಗಳೂರು,ಜು.2-ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ `ದಿ ವಿಲನ್’ ಟೀಸರ್ ಬಿಡುಗಡೆಗೊಂಡು ಸಖತ್ ಸದ್ದು ಮಾಡುತ್ತಿದೆ. ಟೀಸರ್ ಅನ್ನು ಅನೇಕರು ಮೆಚ್ಚಿಕೊಂಡಿದ್ದರೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಕಿತ್ತಾಟ ಶುರುವಾಗಿದೆ. ಇದೀಗ ಟೀಸರ್ ಬಗ್ಗೆ ನಟಿ ಶಾನ್ವಿ ಶ್ರೀವಾಸ್ತವ ಟ್ವಿಟ್ ಮಾಡಿದ್ದಾರೆ.

ಹಾಗಾದರೆ ಶಾನ್ವಿ `ದಿ ವಿಲನ್’ ಟೀಸರ್ ಬಗ್ಗೆ ಏನು ಟ್ವಿಟ್ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ… `ಕಿಚ್ಚ ಸುದೀಪ್ ಹಾಗೂ ಶಿವಣ್ಣ ರವರನ್ನ ‘ವಿಲನ್’ ಪಾತ್ರದಲ್ಲಿ ಹೆಚ್ಚು ಇಷ್ಟ ಪಡುವವಳು ನಾನೊಬ್ಬಳೇನಾ.? ‘ದಿ ವಿಲನ್’ ಚಿತ್ರದಲ್ಲಿ ಒಬ್ಬರದ್ದು ಕಂಪ್ಲೀಟ್ ನೆಗೆಟಿವ್, ಇನ್ನೊಬ್ಬರದ್ದು ಪಾಸಿಟಿವ್-ನೆಗೆಟಿವ್. ಹೀಗಾಗಿ ಈ ಸಿನಿಮಾ ನಾನು ನೋಡಲು ಪರ್ಫೆಕ್ಟ್ ಅನ್ಸುತ್ತೆ. ಇದರಲ್ಲಿ ಯಾರಿಗೂ ಬೇಸರ ಮಾಡುವ ಉದ್ದೇಶ ಇಲ್ಲ. ಟೀಸರ್ ಗಳು ಚೆನ್ನಾಗಿವೆ’ ಎಂದು ಶಾನ್ವಿ ಟ್ವಿಟ್ ಮಾಡಿದ್ದಾರೆ. ಶಾನ್ವಿ ಅವರ ಈ ಟ್ವಿಟ್ ಗೆ ಧನ್ಯವಾದ ಎಂದು ಕಿಚ್ಚ ಸುದೀಪ್ ಟ್ವಿಟ್ ಮಾಡಿದ್ದಾರೆ.

ಇನ್ನು ಫ್ಯಾನ್ಸ್ ವಾರ್ ಬಗ್ಗೆ ಕಿಚ್ಚ ಸುದೀಪ್ ಅನವಶ್ಯಕ ಚರ್ಚೆಗಳಿಗೆ ಆಸ್ಪದ ಕೊಡದಿರಲು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ‘ಪ್ರೀತಿಸಿ, ಎಲ್ಲರಿಗೂ ಪ್ರೀತಿ ಕೊಟ್ಟು ‘ದಿ ವಿಲನ್’ ಚಿತ್ರಕ್ಕೆ ಸಪೋರ್ಟ್ ಮಾಡಿ’ ಎಂದಿದ್ದಾರೆ.
ಮೊನ್ನೆಯಷ್ಟೇ ಬಿಡುಗಡೆ ಆದ ‘ದಿ ವಿಲನ್’ ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. (ಎಂ.ಎನ್)

Leave a Reply

comments

Related Articles

error: