ದೇಶಪ್ರಮುಖ ಸುದ್ದಿ

ನಗದು ರಹಿತ ದೇಶ : ನೌಕರರಿಗೆ ಕಡ್ಡಾಯವಾಗಿ ಚೆಕ್/ಬ್ಯಾಂಕ್‍ ಮೂಲಕ ವೇತನಕ್ಕೆ ಕಾಯ್ದೆ ತಿದ್ದುಪಡಿ

ನೋಟು ಅಮಾನ್ಯ ಬೆನ್ನ ಹಿಂದೆಯೇ ಕೇಂದ್ರ ಸರ್ಕಾರವೂ ನೌಕರರಿಗೆ ಮತ್ತು ಕಾರ್ಮಿಕರಿಗೆ ನಗದು ರಹಿತ ವೇತನ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ.

ಈಗಾಗಲೇ ನಗದು ರಹಿತ ವ್ಯಾಪಾರ ವಹಿವಾಟಿಗೆ ಮುಂದಾಗಿರುವ ಕೇಂದ್ರವೂ ತನ್ನ ಕಾನೂನು ವ್ಯಾಪ್ತಿಯನ್ನು ನೌಕರರ ವರ್ಗಕ್ಕೂ ವರ್ಗಾಯಿಸುವಂತಿದ್ದು ಇನ್ನು ಮುಂದೆ ವೇತನ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಖಾನೆ ಮತ್ತು ಕೈಗಾರಿಕೆಗಳು ತಮ್ಮ ನೌಕರರಿಗೆ ಸಂಬಳವನ್ನು ಚೆಕ್‍ ಮೂಲಕ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು. ಈ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.

18 ಸಾವಿರದೊಳಗೆ ಸಂಬಳ ಪಡೆಯುತ್ತಿರುವ ಕಾರ್ಮಿಕರಿಗೆ ಈ ನೀತಿ ಅನ್ವಯವಾಗುತ್ತದೆ. ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಿದ್ದರೂ ಕೆಲ ಕಾರ್ಖಾನೆಗಳು ಕಡಿಮೆ ವೇತನವನ್ನು ನೀಡುವ ಮೂಲಕ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸುತ್ತಿವೆ ಇದನ್ನು ತಪ್ಪಿಸಲು ಕಾನೂನು ನೇರವಾಗಲಿದ್ದು ಕಾರ್ಮಿಕರಿಗೆ ಹಾಗೂ ನೌಕರಸ್ಥರಿಗೆ ನ್ಯಾಯ ಲಭಿಸಲಿದೆ ಎನ್ನಲಾಗಿದೆ.

Leave a Reply

comments

Related Articles

error: