ಕರ್ನಾಟಕದೇಶ

ಐಟಿ ದಾಳಿ: ಬೆಂಗಳೂರಿನಲ್ಲಿ 2.25 ಕೋಟಿ ನಗದು ವಶ

ನವದೆಹಲಿ: ನೋಟು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವೆಡೆ ಹೊಸ ನೋಟುಗಳು ಅಕ್ರಮ ಸಂಗ್ರಹ ಹೆಚ್ಚುತ್ತಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಬುಧವಾರ ವಿವಿಧೆಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಬೆಂಗಳೂರು, ಪಣಜಿ, ಫರಿದಾಬಾದ್ ನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ 2.25 ಕೋಟಿ ನಗದು, ಪಣಜಿಯಲ್ಲಿ 68 ಲಕ್ಷ ರು. ಹಾಗೂ ಫರಿದಾಬಾದ್ ನಲ್ಲಿ 25 ಲಕ್ಷ ರು. ಮೌಲ್ಯದ ಹೊಸ ನೋಟುಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಮೂಲಕ ಒಟ್ಟು 3.18 ಕೋಟಿ ಮೌಲ್ಯದ ಅಕ್ರಮ ಹಣ ಪತ್ತೆಯಾಗಿದೆ. ಅಧಿಕಾರಿಗಳು ಪ್ರಕರಣದ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳವಾರವಷ್ಟೇ, ದೆಹಲಿಯ ಕರೋಲ್ ಬಾಗ್‍ನಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು 3.25 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು.

Leave a Reply

comments

Related Articles

error: