ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು,ಜು.3:- ಮನೆಯಲ್ಲಿ ಯಾರೂ ಇಲ್ಲ ವೇಳೆ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಬೆಲೆ ಬಾಳುವ ಚಿನ್ನಾಭರಣ ಕದ್ದೊಯ್ದ ಘಟನೆ ರೂಪಾನಗರದಲ್ಲಿ ನಡೆದಿದೆ.

ರೂಪಾನಗರದ ನಿವಾಸಿ ಕಿರಣ್ ಎಂಬವರು ಭಾನುವಾರ ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದರು. ರಾತ್ರಿ ಮನೆಗೆ ಮರಳಿದಾಗ ಮನೆಯ ಮುಂಬಾಗಿಲನ್ನು ಮೀಟಿರುವುದು ಕಾಣಿಸಿದ್ದು, ಒಳಗೆ ಹೋಗಿ ನೋಡಲಾಗಿ ಬೀರುವಿನಲ್ಲಿರಿಸಲಾದ ಸುಮಾರು ಐದು ಲಕ್ಷರೂ.ಮೌಲ್ಯದ ಚಿನ್ನಾಭರಣ ಕಳುವಾಗಿರುವುದು ತಿಳಿದು ಬಂದಿದೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: