
ಮೈಸೂರು
ಅಪಘಾತಕ್ಕೀಡಾದ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕಾರು
ರಿಂಗ್ ರಸ್ತೆ ಸಾತಗಳ್ಳಿ ಬಸ್ ಡಿಪೋ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬ್ಯಾರಿಕೇಡ್ ಬಳಿ ಪೊಲೀಸ್ ಎಸ್ಕಾರ್ಟ್ ವೇಗ ಕಡಿಮೆಗೊಳಿಸಿದಾಗ ಹಿಂದೆ ಬರುತ್ತಿದ್ದ ಸಚಿವರ ಕಾರಿನ ಟೈರ್ ಬರ್ಸ್ಟ್ ಆಗಿದ್ದರಿಂದ ಸಚಿವರ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರು ಮತ್ತು ಎಸ್ಕಾರ್ಟ್ ವಾಹನಗಳು ಭಾಗಶಃ ಜಖಂಗೊಂಡಿವೆ.