ಕರ್ನಾಟಕಪ್ರಮುಖ ಸುದ್ದಿ

ದಿನಾಂಕ ನಮೂದಿಸದೆ ಟೀ ಪುಡಿ ಮಾರಾಟ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ಹಾಸನ (ಜುಲೈ 3): ಹೆಚ್.ಎಂ.ಹಡಬಸವೇಗೌಡ, ಆಹಾರ ಸುರಕ್ಷತಾಧಿಕಾರಿ, ಹಾಸನ ರವರು ಬಿ.ಎಸ್.ರಾಮಶೆಟ್ಟಿ ಬಿನ್ ಬಿ.ಎಸ್.ಸುಬ್ಬರಾಯ ಶೆಟ್ಟಿ, ರಮೇಶ್ ಸ್ಟೋರ್, ಹೊಸಲೈನ್ ರಸ್ತೆ, ಹಾಸನ ನಗರ ಇಲ್ಲಿ ಗಾರ್ಡನ್ ಪ್ರೆಶ್ ಪ್ರೀಮಿಯರ್ ಸಿ.ಟಿ.ಸಿ ಟೀ ಪೌಡರ್ ಪ್ಯಾಕೇಟ್‍ಗಳನ್ನು ಎಫ್.ಎಸ್.ಎಸ್.ಎ ಕಾಯ್ದೆಯಡಿ ಆಹಾರ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಮುಖ್ಯ ಆಹಾರ ವಿಶ್ಲೇಷಕರು, ವಿಭಾಗೀಯ ಪ್ರಯೋಗ ಶಾಲೆ, ಮೈಸೂರು ಇಲ್ಲಿಗೆ ಕಳುಹಿಸಲಾಗಿತ್ತು.

ಟೀ ಪೌಡರ್ ಪ್ಯಾಕೇಟ್ ಮೇಲೆ ತಯಾರಾದ ದಿನಾಂಕ ನಮೂದಸದಿರುವುದರಿಂದ ಮಿಸ್ ಬ್ರಾಂಡೆಡ್ ಹಾಗೂ ಟೀ ಪೌಡರ್‍ಗೆ Sunset Yellow Synthetic Food Colour ಸೇರಿಸಿರುವುದರಿಂದ ಅಸುರಕ್ಷತೆ (Unsafe) ಎಂದು ವರದಿಯಾಗಿರುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಸೆಕ್ಷನೆ 3 ರ ರೀತ್ಯಾ ಉಲ್ಲಂಘನೆಯಾಗಿದೆ.

ಎಫ್.ಎಸ್.ಎಸ್.ಎ ಕಾಯ್ದೆ 2006 ರ ಸೆಕ್ಷನ್ 52 ಮತ್ತು 59 ರ ರೀತ್ಯಾ 4 ಲಕ್ಷದವರೆಗೆ ದಂಡ ಮತ್ತು ಒಂದು ವರ್ಷದವರೆಗೆ ಶಿಕ್ಷೆ ವಿಧಿಸುವ ಅಧಿಕಾರ ನ್ಯಾಯಲಕ್ಕಿರುವುದರಿಂದ ಮೊಕದ್ದಮೆ ದಾಖಲಿಸಲಾಗುವುದು.

ಸಾರ್ವಜನಿಕರು ಟೀ ಪೌಡರ್‍ನ್ನು ಸರಳ ರೀತಿಯಲ್ಲಿ ಪರೀಕ್ಷಿಸಬಹುದಾಗಿದ್ದು, ಒಂದು ಬಿಳಿ ಹಾಳೆ ಮೇಲೆ ಒಂದು ಚಮಚ ಟೀ ಪೌಡರ್‍ಗೆ ನೀರನ್ನು ಹಾಕಿದಾಗ ಹಳದಿ ಕಡು ಕೆಂಪು ಬಣ್ಣ ಕಂಡು ಬಂದರೆ ಕಲಬೆರೆಕೆಯಾಗಿರುತ್ತದೆ. ಬಣ್ಣ ಬರದೆಯಿದ್ದರೆ ಸುರಕ್ಷಿತವಾದ ಟೀಪೌಡರ್ ಆಗಿರುತ್ತದೆ. ಈ ರೀತಿಯ ಕಲಬೆರಕೆ ಟೀಪೌಡರ್‍ನ್ನು ದಿನ ನಿತ್ಯ ಸಾರ್ವಜನಿಕರು ಉಪಯೋಗಿಸುವುದರಿಂದ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುವುದು ಹಾಗೂ ಕ್ಯಾನ್ಸರ್ ಖಾಯಿಲೆಯು ಸಹ ಬರುತ್ತದೆ.

ಆದ್ದರಿಂದ ಸಾರ್ವಜನಿಕರು ಇಂತಹ ಟೀಪೌಡರ್ ಉಪಯೋಗಿಸಬಾರದಾಗಿ ಹಾಗೂ ಇಂತಹ ಟೀಪೌಡರ್ ಕಂಡು ಬಂದರೆ ತಾಲ್ಲೂಕಿನ ಆರೋಗ್ಯ ಇಲಾಖೆ ಆಹಾರ ಸುರಕ್ಷತಾಧಿಕಾರಿಗಳಿಗೆ (ಎಫ್.ಎಸ್.ಎಸ್.ಎ) ದೂರನ್ನು ನೀಡಬಹುದಾಗಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: