ಸುದ್ದಿ ಸಂಕ್ಷಿಪ್ತ

ಅರ್ಜಿ ಆಹ್ವಾನ

ಮೈಸೂರು, ಜು,3:- ಏರ್‍ಪೋರ್ಟ್ ಆಥಾರಿಟಿ ಆಫ್ ಇಂಡಿಯಾ, ಸದರನ್ ರೀಜನ್, ಚನೈ-27 ಇವರಿಂದ ಕರ್ನಾಟಕದಲ್ಲಿ ಖಾಲಿ ಇರುವ ಜ್ಯೂನಿಯರ್ ಅಸಿಸ್ಟೆಂಟ್ (ಫೈರ್ ಸರ್ವೀಸ್) ಹಾಗೂ ಸಿನೀಯರ್ ಅಸಿಸ್ಟೆಂಟ್ (ಎಲೆಕ್ಟ್ರಾನೀಕ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ  ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಜ್ಯೂನಿಯರ್ ಅಸಿಸ್ಟೆಂಟ್ (ಫೈರ್ ಸರ್ವೀಸ್) ಹುದ್ದೆಗೆ ಎಸ್.ಎಸ್.ಎಲ್.ಸಿ ಜೊತೆಗೆ ಮೂರು ವರ್ಷದ ಡಿಪ್ಲೋಮ ಇನ್ ಮೆಕಾನೀಕಲ್/ಆಟೋಮೋಬೈಲ್/ಫೈರ್ ಡಿಪ್ಲೋಮ ದಲ್ಲಿ ಶೇಕಡ 50 ಅಂಕ ಪಡೆದಿರಬೇಕು. ಅಥವಾ ಪಿ.ಯು.ಸಿ ಯಲ್ಲಿ ಶೇ. 50 ಅಂಕ ಪಡೆದಿರಬೇಕು, ಜೊತೆಗೆ ಹೆವಿ ವೆಯಿಕಲ್ ಲೈಸನ್ಸ್ ಪಡೆದಿರಬೇಕು (ಒಂದು ವರ್ಷದ ಹಿಂದೆ ಪಡೆದಿರಬೇಕು) ಅಥವಾ ಒಂದು ವರ್ಷದ ಮಿಡಿಯಂ ವೆಹಿಕಲ್ ಲೈಸನ್ಸ 13 ಜೂನ್ 2018 ರ ಒಳಗೆ ಪಡೆದಿರಬೇಕು ಅಥವಾ ಎಲ್‍ಎಂವಿ ಡ್ರೈವಿಂಗ್ ಲೈಸನ್ಸ್  13 ಜೂನ್ 2018 ರ ಒಳಗೆ ಪಡೆದು  ಎರಡು ವರ್ಷವಾಗಿರಬೇಕು.
ಸಿನೀಯರ್ ಅಸಿಸ್ಟೆಂಟ್ ಹುದ್ದೆಗೆ 3 ವರ್ಷದ ಡಿಪ್ಲೋಮ ಇನ್ ಎಲೆಕ್ಟ್ರಾನಿಕ್/ಟೆಲಿ ಕಾಮ್ಯೂನಿಕೇಷನ್/ರೇಡಿಯೋ ಇಂಜಿನಿಯರಿಂಗ್ ಪಡೆದಿರಬೇಕು, ಹಾಗೂ ಎರಡು ವರ್ಷದ ಅನುಭವ ಪಡೆದಿರಬೇಕು. ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು 15ನೇ ಜುಲೈ 2018,ರ ಕೊನೆಯ ದಿನಾಂಕ ಹಾಗೂ ಅರ್ಜಿ ಶುಲ್ಕ 1000 ರೂ ಗಳು ಅಸಕ್ತ ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಡಿ.ಎಂ.ರಾಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು ದೂರವಾಣಿ ಸಂಖ್ಯೆ 0821-2489972  ಅಥವಾ ಹೆಚ್ಚಿನ ಮಾಹಿತಿ ಹಾಗೂ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು https://aai.aero/en/careers/recruitment ನಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: