ಮೈಸೂರು

ರಾಜ್ಯಕ್ಕೆ ಇಸ್ರೇಲ್ ಕೃಷಿ ಪದ್ಧತಿ ಬಂದರೆ ಕೃಷಿ ಮತ್ತಷ್ಟು ಹಾಳಾಗುತ್ತದೆ : ಬಡಗಲಪುರ ನಾಗೇಂದ್ರ

ಮೈಸೂರು,ಜು.3:- ರಾಜ್ಯ ಸರ್ಕಾರ ಕರ್ನಾಟಕಕ್ಕೆ ಇಸ್ರೇಲ್ ಮಾದರಿ ಕೃಷಿ ಪದ್ಧತಿ  ತರಲು ಹೊರಟಿರುವುದು ಸರಿಯಲ್ಲ.ಇದರ‌ ಬಗ್ಗೆ ಸಮ್ಮಿಶ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ರಾಜ್ಯಕ್ಕೆ ಇಸ್ರೇಲ್ ಕೃಷಿ ಪದ್ಧತಿ ಬಂದರೆ ಕೃಷಿ ಮತ್ತಷ್ಟು ಹಾಳಾಗುತ್ತದೆ ಎಂದು ರಾಜ್ಯ ಸಂಘ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರು ಜಲದರ್ಶಿನಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಸ್ರೇಲ್ ಕೃಷಿ ಪದ್ಧತಿ ಬಂದರೆ ರೈತರು ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಕೃಷಿ ವಿಜ್ಞಾನಿಗಳು ಹಾಗೂ ಎಂಎನ್‌ಸಿ ಕಂಪನಿಗಳ ಬಿತ್ತನೆ‌ ಬೀಜಗಳನ್ನು ನಂಬಿ ಮೋಸ ಹೋಗಿದ್ದಾರೆ. ಮತ್ತೆ ನಮ್ಮ‌ರೈತರು ಮೋಸ ಹೋಗಲು ಬಿಡುವುದಿಲ್ಲ. ಇದರ ಬಗ್ಗೆ ರೈತರಿಗೆ  ನಾವು ಅರಿವು ಮೂಡಿಸುತ್ತೇವೆ. ಈ ಪದ್ಧತಿಯನ್ನು ರಾಜ್ಯಕ್ಕೆ ತರಲು‌ ಬಿಡುವುದಿಲ್ಲ ಎಂದರು.

ಮೇಲುಕೋಟೆಯ ಶಾಸಕರಾಗಿದ್ದ ಪುಟ್ಟಣ್ಣಯ್ಯ  ಅವರು ಜಾರಿಗೆ ತಂದಿದ್ದ  ಯೋಜನೆಗಳು ಮತ್ತು ಕಾಮಗಾರಿಗಳನ್ನು  ಮುಂದುವರಿಸಲು ಅಡ್ಡಿ  ಹಿನ್ನೆಲೆ ಪ್ರತಿಕ್ರಿಯಿಸಿದ ಅವರು ಮೇಲುಕೋಟೆಯ ಶಾಸಕ ಪುಟ್ಟರಂಗ ಶೆಟ್ಟಿ  ಅವರು ಈ ಎಲ್ಲ ಕೆಲಸಗಳಿಗೆ ತೊಂದರೆ ಮಾಡುತ್ತಿದ್ದಾರೆ. ನೀವು  ಶಾಸಕರಾಗಿ, ಸಂಸದರಾಗಿದ್ದವರು. ಈಗ  ಸಚಿವರಾಗಿದ್ದೀರಿ ಆ ಮಟ್ಟಕ್ಕೆ  ಯೋಚನೆ ಮಾಡಿ. ನೀವು ದೊಡ್ಡವರು ದೊಡ್ಡದಾಗಿ  ಯೋಚನೆ  ಮಾಡಿ.ಸಣ್ಣದಾಗಿ ಯೋಚನೆ ಮಾಡಿ ಸಣ್ಣ ವ್ಯಕ್ತಿಗಳಾಗಬೇಡಿ . ನಿಮ್ಮ ಈ ಪ್ರವೃತ್ತಿ ಮುಂದುವರಿದರೆ  ದೊಡ್ಡವರ ಗಮನಕ್ಕೆ ತರುತ್ತೇವೆ. ಆಗಲೂ ಸರಿಹೋಗದಿದ್ದರೆ ಹೋರಾಟದ ಹಾದಿಯನ್ನು  ತುಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಸಿರು ಸೇನೆಯ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: