ಸುದ್ದಿ ಸಂಕ್ಷಿಪ್ತ
ವರ್ಗಾವಣೆ : ಅರ್ಜಿ ಆಹ್ವಾನ
ಮೈಸೂರು, ಜು,3 :2018-19ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ವರ್ಗದ ಅಧಿಕಾರಿ/ಸಿಬ್ಬಂದಿಯವರ ವರ್ಗಾವಣೆ ಸಂಬಂಧ ಸಂಬಂಧಿಸಿದ ಪ್ರಾಧಿಕಾರಕ್ಕೆ ದಿನಾಂಕ: 09.07.2018ರೊಳಗೆ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ http://www.schooleducation.kar.nic.in ಸೇವಾ ವಿವರಗಳು-ಸುತ್ತೋಲೆಗಳು ಅಡಿಯಲ್ಲಿ ಪ್ರಕಟಿಸಲಾಗಿರುವಂತೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ : ಕೆ.ಎಂ.ಆರ್)