ಮೈಸೂರು

ಜು.4ರಿಂದ ಶಾಸ್ತ್ರೀಯ ಕನ್ನಡ ಅಧ್ಯಯನ : ಕಾರ್ಯಾಗಾರ

ಮೈಸೂರು,ಜು.3 : ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ‘ಕನ್ನಡ ಸಾಹಿತ್ಯ : ಅಧ್ಯಯನ ಸವಾಲುಗಳು ಹಾಗೂ ಸಾಧ್ಯತೆಗಳು’ ವಿಷಯವಾಗಿ ಕಾರ್ಯಾಗಾರವನ್ನು ನಾಳೆ (4) ಯಿಂದ ಜು.6ರವರೆಗೆ ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದೆ.

ಜು.4ರ ಬೆಳಗ್ಗೆ 10.30ಕ್ಕೆ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಉದ್ಘಾಟಿಸುವರು. ಭಾಷಾ ತಜ್ಞ ಪ್ರೊ.ಆರ್ವಿಯಸ್ ಸುಂದರಂ, ಸಂಶೋಧನಾಧಿಕಾರಿ ಡಾ.ಎಲ್.ರಾಮಮೂರ್ತಿ ಇರುವರು.

ಶಾ.ಕ.ಅ.ಅ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸುವರು.

ಜು.6ರ ಸಮಾರೋಪದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ, ಪ್ರೊ.ಪಿ.ಉಮಾರಾಣಿ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: