ದೇಶ

ಶೇಕಡಾ 40ರಷ್ಟು ಡಿಸ್ಕೌಂಟ್‍ನಲ್ಲಿ ಸಿಗ್ತಿದೆ ರಾಯಲ್ ಎನ್ಫೀಲ್ಡ್!

ಬೆಂಗಳೂರು (ಜುಲೈ 4): ಮೋಟರ್ ಬೈಕ್ ‍ಪ್ರಿಯರಿಗೆ ಸಂತಸದ ಸುದ್ದಿ. ರಾಯಲ್ ಎನ್ಫೀಲ್ಡ್ ಎಂಡ್ ಆಫ್ ಸೀಜನ್ ಸೇಲ್ ಘೋಷಣೆ ಮಾಡಿದೆ. ಈ ಸೇಲ್‍ನಲ್ಲಿ ಕಂಪನಿ ರೈಡಿಂಗ್ ಗೇರ್, ಅಪೆರಲ್ ಮತ್ತು ಎಸ್.ಸಿರೀಸ್ ಮೇಲೆ ಆಫರ್ ನೀಡ್ತಿದೆ.

ಕಂಪನಿ ರೈಡಿಂಗ್ ಗೇರ್ ಹಾಗೂ ಮರ್ಚಂಡೈಸ್ ಉತ್ಪನ್ನಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ನೀಡ್ತಿದೆ. ಈ ರಿಯಾಯಿತಿ ಸೀಮಿತ ಅವಧಿಗೆ ಸಿಕ್ತಿದೆ. ಗ್ರಾಹಕರು ಈ ಆಫರ್ ಲಾಭವನ್ನು ಜೂನ್ 29 ರಿಂದ ಆಗಸ್ಟ್ 15, 2018 ರವರೆಗೆ ಪಡೆಯಬಹುದಾಗಿದೆ.

ರೈಡಿಂಗ್ ಗೇರ್ ಹಾಗೂ ಮರ್ಚಂಡೈಸ್ ಉತ್ಪನ್ನಗಳನ್ನು ಖರೀದಿಗೆ ಆಸಕ್ತಿಯಿರುವ ಗ್ರಾಹಕರು ಎನ್ಫೀಲ್ಡ್’ನ ಬ್ರಾಂಡ್ ಸ್ಟಾರ್, ಡೀಲರ್ಸ್ ಹಾಗೂ ಎಕ್ಸ್’ಕ್ಲ್ಯೂಸಿವ್ ಗೇರ್ ಮಳಿಗೆಗಳಲ್ಲಿ ಖರೀದಿ ಮಾಡಬಹುದಾಗಿದೆ.

ಇ-ಕಾಮರ್ಸ್ ಆನ್ಲೈನ್ ವೆಬ್ಸೈಟ್’ಗಳಲ್ಲಿ ಹಾಗೂ ಎನ್ಫೀಲ್ಡ್ ಕಂಪನಿಯ ಅಧಿಕೃತ ವೆಬ್ಸೈಟ್’ನಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಎನ್ಫೀಲ್ಡ್ ನೀಡ್ತಿರುವ ಡಿಸ್ಕೌಂಟ್ ಆಫರ್’ನಲ್ಲಿ ಹೆಲ್ಮೆಟ್, ಜಾಕೆಟ್, ಶೂ, ಬೈಕ್ ಕವರ್, ಕನ್ನಡಕ, ರೇನ್ ಜಾಕೆಟ್ ಸೇರಿದಂತೆ ಕೆಲ ಉತ್ಪನ್ನಗಳು ಸೇರಿವೆ. (ಎನ್.ಬಿ)

Leave a Reply

comments

Related Articles

error: