ಸುದ್ದಿ ಸಂಕ್ಷಿಪ್ತ
ಸುತ್ತೂರು ಜಾತ್ರೆ : ಗ್ರಾಮೀಣ ಆಟ ಸ್ಪರ್ಧೆ
ಜನವರಿ 24ರಿಂದ 29ರವರೆಗೆ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮೀಣ ಆಟಗಳನ್ನು ಪ್ರೋತ್ಸಾಹಿಸಲು ಆಟಗಳನ್ನು ಹಮ್ಮಿಕೊಳ್ಳಲಾಗಿದ್ದು, ಡಿ.26ರಂದು ಪುರುಷರಿಗಾಗಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟ ಕೆಸರುಗದ್ದೆಯಲ್ಲಿ, 50ಕೆಜಿ ತೂಕ ಚೀಲ ಹೊತ್ತು ಓಡುವುದು, ಗುಂಡು ಎತ್ತುವುದು ಮತ್ತು ಬುಗುರಿ, ಮಹಿಳೆಯರಿಗಾಗಿ ಡಿ.27ರಂದು ನಿಂಬೆಹಣ್ಣು ಇರುವ ಚಮಚ ಬಾಯಲ್ಲಿಟ್ಟು ಓಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವುದು, ಹಗ್ಗಜಗ್ಗಾಟ ಮೈದಾನದಲ್ಲಿ, ಅಳಗುಳಿಮಣೆ, ನೀರು ತುಂಬಿದ ಬಿಂದಿಗೆ ತಲೆಯ ಮೇಲಿಟ್ಟು ಓಡುವುದು, ಆಣೆಕಲ್ಲು ಆಟಗಳನ್ನು ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 7259800344 ನ್ನು ಸಂಪರ್ಕಿಸಬಹುದು.