ಕರ್ನಾಟಕ

ಮೈತ್ರಿ ಸರ್ಕಾರದ ಮೊದಲ ಬಜೆಟ್: ಕೆಲವು ವಸ್ತುಗಳ ದರ ಏರುವ ಸಾಧ್ಯತೆ

ಬೆಂಗಳೂರು (ಜುಲೈ 4): ಇದೇ ಗುರುವಾರ (ಜುಲೈ 5) ರಾಜ್ಯದ ಮೈತ್ರಿ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದ್ದು, ಕೆಲವು ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸಣ್ಣ, ಅತಿಸಣ್ಣ ರೈತರ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕಿನ‌ ಸಾಲಮನ್ನಾ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದ್ದು ಘೋಷಣೆಯಷ್ಟೇ ಬಾಕಿ ಇದೆ.

ಸಾಲ ಘೋಷಣೆಯಾದ ಬಳಿಕೆ ಉಂಟಾಗಲಿರುವ ಹಣದ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಬೊಕ್ಕಸದ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹಾಕಲು ರಾಜ್ಯ ಸರ್ಕಾರ ಮುಂದಾಗಲಿದೆ ಎನ್ನಲಾಗಿದ್ದು, ಈ ಪೈಕಿ ಪೆಟ್ರೋಲ್, ಡಿಸೇಲ್, ಮದ್ಯ, ಸಿಗರೇಟ್, ವಾಹನಗಳ ನೊಂದಣಿ, ಆಸ್ತಿ ದರ ಗಳ ಮೇಲಿನ ಸುಂಕವನ್ನು ಹೆಚ್ಚಳ ಮಾಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡನೆ ಮಾಡುವ ಬಜೆಟ್ ನತ್ತ ಎಲ್ಲರ ಗಮನ ನೆಟ್ಟಿದೆ. (ಎನ್.ಬಿ)

Leave a Reply

comments

Related Articles

error: