ಮೈಸೂರು

ವ್ಯಕ್ತಿ ಸಾವು

ಮೈಸೂರು,ಜು.4:- ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ಇಂದು ಬೆಳಿಗ್ಗೆ ಅವರ ಮೃತದೇಹ ಸಾರ್ವಜನಿಕರಿಗೆ ಕಂಡು ಬಂದ ಘಟನೆ ಅಗ್ರಹಾರ ಮಧುವನದಲ್ಲಿ ನಡೆದಿದೆ.

ಮೃತರನ್ನು ಚಿಕ್ಕ ಸಿದ್ದ ನಾಯಕ (53) ಎಂದು ಗುರುತಿಸಲಾಗಿದ್ದು, ಬೆಳಗಿನ ಜಾವ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಅತಿಯಾದ ಮದ್ಯಸೇವನೆಯಿಂದ ಸಾವನ್ನಪ್ಪಿರಬೇಕು, ಇಲ್ಲವೇ ಹೃದಯಾಘಾತವಾಗಿರಬೇಕೆಂದು ಶಂಕಿಸಲಾಗಿದ್ದು, ತನಿಖೆಯ ಬಳಿಕವಷ್ಟೇ ಮಾಹಿತಿ ಲಭ್ಯವಾಗಬೇಕಿದೆ.  ಸ್ಥಳಕ್ಕೆ ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಇಂದು ಬೆಳಗ್ಗೆ 5.30ಕ್ಕೆ ಮನೆ ಯಿಂದ ಹೊರಗೆ ಹೋಗಿದ್ದರು ಎನ್ನಲಾಗಿದೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: