ಕರ್ನಾಟಕ

ಸ್ಕೌಟ್ಸ್ ವತಿಯಿಂದ 150 ಸಸಿ ನೆಟ್ಟು ಅರ್ಥಪೂರ್ಣ ವನಮಹೋತ್ಸವ

ಹಾಸನ (ಜುಲೈ 4): ಪರಿಸರವಿಲ್ಲದೆ ನಾವಿಲ್ಲ ಜೀವಿಗಳ ಉಳಿವು ಆರೋಗ್ಯ ಪರಿಸರದಿಂದ ಮಾತ್ರ ಸಾಧ್ಯ. ಆದ್ದರಿಂದ ಪರಿಸರ ಸ್ವಚ್ಛತೆ ಕಾಪಾಡುವುದು ಗಿಡನೆಡುವುದು ನೆಟ್ಟಗಿಡವನ್ನು ಕಾಪಾಡುವ ಕೆಲಸ ಮಾಡಿ ಎಂದು ಅನನ್ಯ ಅಧ್ಯಕ್ಷರಾದ ಕೆ ಟಿ ಜಯಶ್ರೀ ತಿಳಿಸಿದರು.

ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ದುದ್ದ ಆರ್ ಎಸ್‍ನ ಸ್ಕೌಟ್ಸ್ ಗೈಡ್ಸ್ ಘಟಕದ ಸ್ಕೌಟರ್ಡ್ ಗೈಡರ್ಸಗಳಾದ ಎಮ್.ಎಸ್ ಪ್ರಕಾಶ್ ಹಾಗೂ ಬಿ.ಎಸ್ ವನಜಾಕ್ಷಿ – ಇವರು ಎಂ.ಡಿ ಹೊಸೂರಿನ ಮುರಾರ್ಜಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗಿಡಮರಗಳು ಕೇವಲ ಹಸಿರಲ್ಲ, ಸಕಲ ಜೀವರಾಶಿಗೆ ಉಸಿರು ನೀಡುವ ಸಂರಕ್ಷಿಸುವ ಸಂಜೀವಿನಿಗಳು, ಹಾಗೂ ವಾತಾವರಣದ ವಾಯುಮಾಲಿನ್ಯವನ್ನು ತಡೆಗಟ್ಟಿ, ಭೂಮಿಯಲ್ಲಿ ನೀರು ಹಿಡಿದಿಡುವ , ಮಳೆಯನ್ನು ಭೂಮಿಗೆ ಆಕರ್ಷಿಸುವ ಕೆಲಸವನ್ನು ಮಾಡುವುದರಿಂದ ನಾವು ಹೆಚ್ಚು ಹೆಚ್ಚು ಗಿಡಮರ ನೆಟ್ಟು ಪರಿಸರ ಸಂರಕ್ಷಿಸುವ ಕೆಲಸ ಮಾಡಬೇಕೆಂದು ಪ್ರತಿನಿಧಿ ಪತ್ರಿಕೆಯ ಸಂಪಾದಕರೂ ಮಾಜಿ ಕ ಸಾ ಪ ಅಧ್ಯಕ್ಷರೂ ಆದ ಉದಯರವಿಯವರು ಅಭಿಪ್ರಾಯಪಟ್ಟರು.

ಪ್ರಕೃತಿಯು ಮಾನವನ ದುರಾಸೆಯಿಂದಾಗಿ ಆಗಿರುವ ಮಾಲಿನ್ಯ ತಡೆಗಟ್ಟಿ ಜೀವಿಗಳ ಉಳಿವಿಗೆ ನೆರವಾಗಲು ಪರಿಸರ ಸಂರಕ್ಷಿಸಿ ಎಲ್ಲರ ಉಸಿರಿನ ಮೂಲ ಆಮ್ಲಜನಕವನ್ನು ಶುದ್ಧೀಕರಿಸಲು ಅತ್ಯಾವಶ್ಯಕವಾದ ಪರಿಸರ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ನುಡಿದರು.

ನಂತರ ಅದ್ಯಕ್ಷತೆ ವಹಿಸಿದ್ದ ಮುರಾರ್ಜಿ ಶಾಲೆಯ ಹಿರಿಯ ಶಿಕ್ಷಕರಾದ ಧರ್ಮರವರು ಮನುಷ್ಯನಿಲ್ಲದೆ ಮರ ಬೆಳೆದು ಬದುಕುತ್ತದೆ ಆದರೆ ಮರ ಪ್ರಕೃತಿಯಿಲ್ಲದೆ ಮನುಷ್ಯ ಬದುಕಲಾರ ಆದ್ದರಿಂದ ನಾವೆಲ್ಲಾ ಪ್ರಕೃತಿಯ ಸಂರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ದುದ್ದ ಶಾಲೆಯವರು ನಮ್ಮ ಶಾಲೆಯಲ್ಲಿ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ದನ್ಯವಾದಗಳನ್ನೂ ನುಡಿಯವುದರ ಮೂಲಕ ಪರಿಸರ ಮಹತ್ವ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಜಾವಾಣಿಯ ಪ್ರಧಾನ ವರದಿಗಾರರಾದ ಸುನೀಲ್ ಕೆ ಎಸ್ ಆರ್ ಜಿ ಗಿರೀಶ್ ಕೊಟ್ರೇಶ್ ಉಪ್ಪಾರ್ ಮುರಾರ್ಜಿಶಾಲೆಯ ಸ್ಕೌಟ ಮಾಸ್ಟರ್ಸಗಳಾದ ರಮೇಶ್ ಜಗದೀಶ್ ಹಾಗೂ ಅದ್ಯಾಪಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂ ಎಸ್ ಪ್ರಕಾಶ್ ಆಶಯನುಡಿ ನುಡಿದರು ಬಿಎಸ್ ವನಜಾಕ್ಷಿ ನಿರೂಪಿಸಿ ಸ್ವಾಗತಿಸಿದರು. ನಂತರ ಶಾಲಾ ಆವರಣದಲ್ಲಿ 150 ಗಿಡಗಳನ್ನು ನೆಡಲಾಯಿತು. (ಎನ್.ಬಿ)

Leave a Reply

comments

Related Articles

error: