
ಕರ್ನಾಟಕಪ್ರಮುಖ ಸುದ್ದಿ
ಮೇಟಿ ರಾಜೀನಾಮೆ ಅಂಗೀಕಾರ: ಸಿಐಡಿ ತನಿಖೆಗೆ ಪ್ರಕರಣ
ಬೆಂಗಳೂರು: ಎಚ್.ವೈ.ಮೇಟಿ ನೀಡಿದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಇಂದು (ಡಿ.14) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮೇಟಿ, ರಾಜೀನಾಮೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಕಳುಹಿಸಿದ್ದು, ರಾಜೀನಾಮೆ ಅಂಗೀಕಾರವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಐಡಿ ತನಿಖೆಗೆ ಪ್ರಕರಣ:
ಸತ್ಯಾಸತ್ಯತೆ ಅರಿಯಲು ರಾಜ್ಯ ಸರ್ಕಾರವು ರಾಸಲೀಲೆ ಹಗರಣದ ಸಿ.ಡಿ ಬಿಡುಗಡೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.
ಮೇಟಿಗೆ ಸಿಎಂ ತರಾಟೆ:
ರಾಜೀನಾಮೆ ನೀಡಲು ಗೃಹ ಕಚೇರಿ ‘ಕೃಷ್ಣಾ’ಗೆ ಆಗಮಿಸಿದ ಮೇಟಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಛೀ.. ಥೂ ಎಂದು ಛೀಮಾರಿ ಹಾಕಿದ ಘಟನೆ ನಡಿದಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿಗಳ ಈ ಏರುದನಿಯ ನಡವಳಿಕೆಯಿಂದ ಅಧಿಕಾರಗಳೂ ಅವಕ್ಕಾದರು ಎನ್ನಲಾಗಿದೆ.