ಸುದ್ದಿ ಸಂಕ್ಷಿಪ್ತ

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

ಮೈಸೂರು, ಜು,5:- ಮೈಸೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2017-2018 ಸಾಲಿನ ಹಿಂಗಾರು (ರಬಿ) ಋತುವಿನಲ್ಲಿ ಬೆಳೆದ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಮೈಸೂರು ತಾಲೂಕಿನ ಬಂಡೀಪಾಳ್ಯದ ಎಪಿಎಂಸಿ, ನಂಜನಗೂಡಿನ ಎಪಿಎಂಸಿ ಯಾರ್ಡ್, ಟಿ.ನರಸೀಪುರದ ಎಪಿಎಂಸಿ ಯಾರ್ಡ್, ಬನ್ನೂರಿನ ಎಪಿಎಂಸಿ ಯಾರ್ಡ್, ಕೆ.ಆರ್.ನಗರದ ಎಪಿಎಂಸಿ ಯಾರ್ಡ್, ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಹಾಗೂ ಸರಗೂರಿನ ಎಪಿಎಂಸಿ ಯಾರ್ಡ್‍ನಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಪ್ರತಿ ಕ್ವಿಂಟಾಲ್ 1,550/- ಬೆಂಬಲ ಬೆಲೆ ಯೋಜನೆಯಡಿ ದಿನಾಂಕ 31-08-2018 ರವರೆಗೆ ಭತ್ತ ಖರೀದಿಸಲಾಗುವುದು.
ಭತ್ತದ ಗುಣಮಟ್ಟದ ತೇವಾಂಶ ಶೇ. 17 ಗರಿಷ್ಠ ಮಿತಿಯೊಳಗಿರಬೇಕು. ಇದಕ್ಕಿಂತ ಹೆಚ್ಚಿನ ತೇವಾಂಶವಿದ್ದಲ್ಲಿ ಭತ್ತವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಮಾರಾಟದ ಸಮಯದಲ್ಲಿ ಫಸಲು ಪಹಣಿಯನ್ನು ಸಂಬಂಧಪಟ್ಟ ತಹಶೀಲ್ದಾರಿಂದ ದೃಢೀಕರಿಸಿ ಸಲ್ಲಿಸಬೇಕು. 50 ಕೆ.ಜಿ. ತೂಕದ ಒಂದು ಬಾರಿ ಉಪಯೋಗಿಸಲಾದ ಚೀಲವನ್ನು ಪ್ರತಿ ಚೀಲಕ್ಕೆ ರೂ. 12/- ಪಾವತಿಸಿ ಖರೀದಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: