ಸುದ್ದಿ ಸಂಕ್ಷಿಪ್ತ

ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

ಮೈಸೂರು, ಜು,5:-   ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯೋರ್ವರು ಜುಲೈ 3 ರಂದು ಮೃತಪಟ್ಟಿದ್ದು, ಮೃತ ದೇಹವು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ.
ಮೃತರ ಚಹರೆ ಇಂತಿದೆ: ಎತ್ತರ 5.6 ಅಡಿ, ಸಣ್ಣದಾದ ಮೈಕಟ್ಟು, ಕೋಲುಮುಖ, ಗಿಡ್ಡ ಮೂಗು, ಅಗಲವಾದ ಕಿವಿ, ತಲೆಯಲ್ಲಿ 4 ಇಂಚು ಉದ್ದದ ಕಪ್ಪು-ಬಿಳಿ ಕೂದಲು ಇರುತ್ತದೆ. ಮೃತರ ಮೈಮೇಲೆ ಆಸ್ಪತ್ರೆಯ ಒಂದು ಹಸಿರು ಬಟ್ಟೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬಟ್ಟೆಗಳು ಇರುವುದಿಲ್ಲ.
ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: