ಕರ್ನಾಟಕಪ್ರಮುಖ ಸುದ್ದಿ

ಅಂಟುವಾಳ ಕಾಯಿ ಕೃಷಿ, ವ್ಯಾಪಾರಕ್ಕೆ ಉತ್ತೇಜನ : ಸಿಎಂ

ಬೆಂಗಳೂರು (ಜುಲೈ 5): ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನೇ ಪರ್ಯಾಯವಾಗಿ ಬಳಸಿಕೊಳ್ಳುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮುಂದಾಗಿದ್ದು ಈ ನಿಟ್ಟಿನಲ್ಲಿ ಅವರು ಅಂಟುವಾಳ ಕಾಯಿ ಬೇಸಾಯಕ್ಕಾಗಿ 10 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಬಜೆಟ್‍’ನಲ್ಲಿ ತಿಳಿಸಿದ್ದಾರೆ.

ಮನೆ ಬಳಕೆಯ ಶುಭ್ರತೆಗಾಗಿ ಪ್ರಕೃತಿಯಲ್ಲಿ ದೊರೆಯುವ ಅಂಟುವಾಳ ಕಾಯಿಯನ್ನು ಬಳಸುತ್ತಿದ್ದೆವು. ಈಗ ಇದು ಮರೆಯಾಗಿ ಪರಿಸರಕ್ಕೆ ಹಾನಿಕಾರಿಯಾದ ಪೌಡರ್‌ಗಳು, ಡಿಟರ್ಜೆಂಟ್‌ಗಳು ಬಳಕೆಗೆ ಬಂದಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮುಂದುವರಿದ ದೇಶಗಳಲ್ಲಿ ಪರಿಸರ ಸ್ನೇಹಿಯಾದ ಅಂಟುವಾಳದ ಡಿಷ್’ವಾಷ್ ಸೋಪು, ವಾಶಿಂಗ್ ಮೆಷಿನ್ ಸೋಪುಗಳು ವ್ಯಾಪಕವಾಗಿ ಬಳಕೆಗೆ ಬಂದಿವೆ ಎಂದು ಹೇಳಿದರು.

ವಿದೇಶಗಳಲ್ಲಿ ಜನಪ್ರಿಯವಾಗುತ್ತಿರುವ ಪರಿಸರ ಸ್ನೇಹಿ ಡಿಟಜೆಂಟ್ ಉದ್ಯಮದ ಅವಕಾಶವನ್ನು ನಮ್ಮ ರೈತರಿಗೆ ಒದಗಿಸಿದರೆ ಅನುಕೂಲವಾಗಲಿದೆ. ಆದ್ದರಿಂದ ಅಂಟುವಾಳ ಕಾಯಿ ಆಧಾರಿತ ಸೋಪು ಮತ್ತು ಡಿಟರ್ಜೆಂಟ್‌ಗಳ ಉತ್ಪಾದನೆಗೆ ಅನುಕೂಲವಾಗುವಂತೆ ಅಂಟುವಾಳ ಕಾಯಿ ಮರಗಳ ವ್ಯಾಪಕ ಬೇಸಾಯಕ್ಕಾಗಿ ಒಂದು ಕಾರ್ಯಕ್ರಮವನ್ನು ರೂಪಿಸುವ ಉದ್ದೇಶಕ್ಕಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗುವುದು ಅಂತ ಹೇಳಿದರು. (ಎನ್.ಬಿ)

Leave a Reply

comments

Related Articles

error: