
ಮೈಸೂರು
ಸಹಪಂಕ್ತಿ ಭೋಜನ
ಬಿಜೆಪಿ ಚಾಮರಾಜ ವಿಧಾನಸಭಾ ಕ್ಷೇತ್ರ ಘಟಕದ ಪರಿಶಿಷ್ಟ ಜಾತಿ ಮೋರ್ಚಾ ವಿಭಾಗದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆಯ ಹುಟ್ಟುಹಬ್ಬದ ಅಂಗವಾಗಿ ಮಾನಸನಗರ(ಕುದುರೆ ಮಾಳ) ಬಡಾವಣೆಯಲ್ಲಿರುವ ಮೋರ್ಚಾದ ಉಪಾಧ್ಯಕ್ಷ ಕೃಷ್ಣ ಮತ್ತು ಸುಜಾತ ದಂಪತಿ ಮನೆಯಲ್ಲಿ ಬುಧವಾರ ಸಹಪಂಕ್ತಿ ಭೋಜನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷ್ಣ ಅವರ ಮನೆಯಲ್ಲೇ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಹಪಂಕ್ತಿ ಭೋಜನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಕ್ಷೇತ್ರೀಯ ಸಂಘ ಚಾಲಕ ನಾಗರಾಜ್, ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಚಾಮರಾಜ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಜಿ.ಶ್ರೀನಿವಾಸ್, ನಾರಾಯಣಸ್ವಾಮಿ ಸೇರಿದಂತೆ ಸುಮಾರು ನೂರಾರು ಮಂದಿ ಪಾಲ್ಗೊಂಡಿದ್ದರು.