
ಮೈಸೂರು
ಅಮರವಾಣಿ ಪ್ರಶಸ್ತಿ ಪ್ರದಾನ
ರೋಟರಿ ಕ್ಲಬ್ ಮೈಸೂರು ಮಿಡ್ ಟೌನ್ ವತಿಯಿಂದ ಬುಧವಾರ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ರೋಟರಿ ಕೇಂದ್ರ ಸಭಾಂಗಣದಲ್ಲಿ ಪ್ರೊ. ಎಂ.ಜಿ.ನಂಜುಂಡಾರಾಧ್ಯ ಸ್ಮಾರಕ ರೋಟರಿ ಮೈಸೂರು ಮಿಡ್ ಟೌನ್ –ಅಮರವಾಣಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಜೈನ ಶಾಸ್ತ್ರ ಮತ್ತು ಪ್ರಾಕೃತ ವಿದ್ವಾಂಸರಾದ ಪ್ರೊ.ಶುಭಚಂದ್ರ ಅವರಿಗೆ, ಹಿರಿಯ ಕನ್ನಡ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅಮರವಾಣಿ ಪ್ರಶಸ್ತಿಯನ್ನು ಪ್ರದಾನಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಕೆ.ಬಿ.ಹರೀಶ್, ಕಾರ್ಯದರ್ಶಿ ಎ.ಎನ್.ಅಣ್ಣಯ್ಯ, ಪ್ರಶಸ್ತಿ ಸ್ಥಾಪಕ ಡಾ.ಎಂ.ಎನ್.ಭೀಮೇಶ್ ಮತ್ತಿತರರು ಉಪಸ್ಥಿತರಿದ್ದರು.