ಮೈಸೂರು

ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ವಿತರಣೆ

ಮೈಸೂರು,ಜು.6:- ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 61 ರಲ್ಲಿ  ಹುಲಿಯಮ್ಮನ ದೇವಸ್ಥಾನ ಮುಂಭಾಗದ ಸಮುದಾಯ ಭವನದಲ್ಲಿ ಕೆಂದ್ರ ಸರ್ಕಾರದ ಉಜ್ವಲ ಯೋಜನೆಯಿಂದ ಸುಮಾರು 100 ಕುಟುಂಬದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಗಳನ್ನು ವಿತರಿಸಲಾಯಿತು.

ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ವಿತರಿಸಿದರು. ಬಳಿಕ ಮಾತನಾಡಿದ ಅವರು ಮುಂದಿನ ಬಾರಿ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ವಾರ್ಡ್ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು.  ಈ ಸಂದರ್ಭದಲ್ಲಿ ಬಿ ಪಿ ಮಂಜುನಾಥ ನಾಗರಾಜ್ ,ಬಿ ಆನಂದ್,ಚೇತನ್, ಮಂಜುನಾಥ,ಗಿರಿಧರ್ ,ಮಣಿರತ್ನಂ,ಚಿನ್ನಸ್ವಾಮಿ, ರಂಗಸ್ವಾಮಿ, ಪದ್ಮನಾಭ, ಸಿದ್ದರಾಜು. ಯೋಗೇಶ್,ಲೊಲಪ್ ನಾರಾಯಣ್,.ಶಿವಕುಮಾರ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: