
ಮೈಸೂರು
ನೀರು ಪೂರೈಕೆಯಲ್ಲಿ ವ್ಯತ್ಯಯ ‘ಡಿ.17’
ಮೈಸೂರು ನಗರದ ಹೊಂಗಳ್ಳಿ 3ನೇ ಹಂತದ ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ತುರ್ತು ದುರಸ್ತಿ ಕಾಮಗಾರಿವಿರುವುದರಿಂದ ಡಿ.17ರಂದು ನಗರದ 19ನೇ ವಾರ್ಡಿನಿಂದ 45ನೇ ವಾರ್ಡ್ವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯುಂಟಾಗುವುದು.
ಆರ್.ಎಂ.ಪಿ.ಬಿ.ಇ.ಎಂ.ಎಲ್, ಕೆ.ಹೆಚ್.ಬಿ. ಕಾಲೋನಿ, ಹೂಟಗಳ್ಳಿ, ಮೇಟಗಳ್ಳಿ, ಕುಂಬಾರಕೊಪ್ಪಲು, ವಿಜಯನಗರ 3ನೇ ಹಂತ, ಹೆಬ್ಬಾಳ 1ನೇ ಹಂತ, 2ನೇ ಹಂತ 3ನೇ ಹಂತ, ಲೋಕನಾಯಕನಗರ, ಬನ್ನಿಮಂಟಪ, ಬಿ.ಎಂ. ಶ್ರೀನಗರ ಬೃಂದಾವನ ಬಡಾವಣೆ, ವಿವಿ ಮೊಹಲ್ಲಾ, ಒಂಟಿಕೊಪ್ಪಲು, ಮಂಜುನಾಥಪುರ, ವಿನಾಯಕ ನಗರ, ಮಂಡಿ ಮೊಹಲ್ಲಾ, ಗೋಕುಲಂ, ಯಾದವಗಿರಿ ಹಾಗೂ ಇತರೆ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಅಧಿಕಾರಿಗಳು ಕೋರಿದ್ದಾರೆ.