ಮನರಂಜನೆ

ನಟಿ ಮಯೂರಿ ಅವತಾರ ಕಂಡು ಬೆಚ್ಚಿ ಬಿದ್ದ ಸಂಚಾರಿ ವಿಜಯ್.!

ಬೆಂಗಳೂರು,ಜು.6-ನಟಿ ಮಯೂರಿ ಅವರ ಹೊಸ ಅವತಾರವನ್ನು ನೋಡಿ ನಟ ಸಂಚಾರಿ ವಿಜಯ್ ಬೆಚ್ಚಿ ಬಿದ್ದಿದ್ದಾರೆ. ಮಯೂರಿ ಅವರ ಅಂತಹ ಯಾವ ಅವತಾರ ಸಂಚಾರಿ ವಿಜಯ್ ಅವರನ್ನು ಬೆಚ್ಚಿ ಬೀಳುವಂತೆ ಮಾಡಿತು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ…

ಮಯೂರಿ ಅಭಿನಯದ `ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ನಲ್ಲಿ ಮಯೂರಿ ಅವರ ಅವತಾರ ನೋಡಿ ಸಂಚಾರಿ ವಿಜಯ್ ಹೆದರಿಕೊಂಡಿದ್ದಾರೆ.

ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರದಲ್ಲಿ ನಟಿ ಮಯೂರಿ, ಸಂಚಾರಿ ವಿಜಯ್, ಗೌತಮ್ ಹಾಗೂ ದುನಿಯಾ ರಶ್ಮಿ ಅಭಿನಯ ಮಾಡಿದ್ದಾರೆ. ರಾಮ್ ಚಂದ್ರ ನಿರ್ದೇಶನದ ಚಿತ್ರದಲ್ಲಿ ಮಯೂರಿ ರೌದ್ರಾವತಾರದ ಲುಕ್ ಬಿಡುಗಡೆ ಆಗಿದೆ. ನಟ ಗೌತಮ್ ಹುಟ್ಟುಹಬ್ಬದ ವಿಶೇಷವಾಗಿ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ವಸುಂದರ ಕ್ರಿತಿಕ್ ಫಿಲಂಸ್ ಅಡಿಯಲ್ಲಿ ನಿರ್ಮಾಣ ಆಗಿರುವ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದೆ.

ಮಯೂರಿ ಹಾಗೂ ಸಂಚಾರಿ ವಿಜಯ್ ಸಾಕಷ್ಟು ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸಿದ್ದು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಕೂಡ ಇಬ್ಬರ ವೃತ್ತಿ ಜೀವನದಲ್ಲಿ ವಿಸೇಷ ಸಿನಿಮಾ ಆಗುವ ಸೂಚನೆ ಫಸ್ಟ್ ಲುಕ್ ನಲ್ಲಿ ಗೊತ್ತಾಗುತ್ತಿದೆ.  (ಎಂ.ಎನ್)

Leave a Reply

comments

Related Articles

error: