ಪ್ರಮುಖ ಸುದ್ದಿ

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಭೇಟಿಗೆ ತೆರಳಿದ್ದಾರಂತೆ ನಟ ಅಕ್ಷಯ್ ಕುಮಾರ್

ದೇಶ(ನವದೆಹಲಿ)ಜು.6:- ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತನಗೆ ‘ಅನಾರೋಗ್ಯ’  ಎಂದು ಟ್ವೀಟ್ ಮಾಡಿದ ಕೂಡಲೇ ಅದನ್ನು ನೋಡಿದ ನಟ ಅಕ್ಷಯ್ ಕುಮಾರ್ ಸೋನಾಲಿ ಬೇಂದ್ರೆ ಭೇಟಿಗೆ ತೆರಳಿದ್ದಾರಂತೆ.

ನ್ಯೂಯಾರ್ಕ್ ನಲ್ಲಿ ತನ್ನ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ಸೋನಾಲಿಯ ಬೇಂದ್ರೆಯನ್ನು ಭೇಟಿ ಮಾಡಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ತೆರಳಿದ್ದಾರಂತೆ. ಈ ಕುರಿತು ಹಿಂದೂಸ್ಥಾನ್ ಟೈಮ್ಸ್ ಜೊತೆ ಮಾತನಾಡಿರುವ ಅಕ್ಷಯ್ ಕುಮಾರ್ ‘ಸೋನಾಲಿಯನ್ನು ನಾನು ಬಲ್ಲೆ. ಆಕೆ ಹೋರಾಟಗಾರ್ತಿ. ದೇವರು ಆಕೆಗೆ ಹೋರಾಡುವ ಶಕ್ತಿ ನೀಡಲಿ, ಅವರನ್ನು ಶೀಘ್ರ ಗುಣಮುಖರಾಗುವಂತೆ ಮಾಡಲಿ’ ಎಂದಿದ್ದಾರಂತೆ. ಸೋನಾಲಿ ಬೇಂದ್ರೆ ಜು.4ರಂದು ಟ್ವೀಟರ್ ನಲ್ಲಿ ತನ್ನ ಅನಾರೋಗ್ಯದ ಕುರಿತು ಬರೆದುಕೊಂಡಿದ್ದರು. ‘ನನಗೆ ಹೈಗ್ರೇಡ್ ಕ್ಯಾನ್ಸರ್ ಇದೆಯೆಂದು ರಿಪೋರ್ಟ್ ಸಿಕ್ಕಿದೆ. ನನ್ನ ಕುಟುಂಬ, ಸ್ನೇಹಿತರು ನನಗೆ ಬೆಂಬಲವಾಗಿದ್ದಾರೆ. ನನ್ನ ಕುರಿತು ಕಾಳಜಿ ಹೊಂದಿದ್ದಾರೆ. ಅವರಿಗೆ ನನ್ನ ಕೃತಜ್ಞತೆ ತಿಳಿಸುತ್ತೇನೆ. ನಾನೆಷ್ಟು ಭಾಗ್ಯಶಾಲಿ. ಹೋರಾಟಕ್ಕೆ ಇದಕ್ಕಿಂತಲೂ ಉತ್ತಮ ಮಾರ್ಗ ಯಾವುದಿಲ್ಲ. ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಆಶಾವಾದಿ. ಮಾರ್ಗದಲ್ಲಿ ಬರುವ ಎಲ್ಲ ಸಂಕಷ್ಟಗಳನ್ನೆದುರಿಸಲು ಹೋರಾಡುತ್ತೇನೆ. ನಿಮ್ಮೆಲ್ಲರ ಪ್ರೀತಿ ನನ್ನನ್ನು ರಕ್ಷಿಸಲಿದೆ’ ಎಂದು ಬರೆದುಕೊಂಡಿದ್ದರು. ವಿಷಯ ತಿಳಿಯುತ್ತಲೆ ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್ ಶೋ ನ ಹುಮಾ ಖುರೇಶಿ ಕೂಡ ಅವರ ಮುಂಬೈ ಮನೆಗೆ ಭೇಟಿ ನೀಡಿ ಅವರ ಕುಟುಂಬಿಕರನ್ನು ಭೇಟಿಯಾಗಿದ್ದಾರಂತೆ. (ಎಸ್.ಎಚ್)

Leave a Reply

comments

Related Articles

error: