ಸುದ್ದಿ ಸಂಕ್ಷಿಪ್ತ

ಜು10 ರಂದು ಸಾವಿರ ಗಿಡ ನೆಡುವ ಕಾರ್ಯಕ್ರಮ

ಮೈಸೂರು,ಜು.6 : ಕಲ್ಯಾಣಗಿರಿಯ ಕಲ್ಯಾಣ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ, ಅರಣ್ಯ ಇಲಾಖೆ, ಗೋಪಿನಾಥ್ ಶಣೈ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಹಾಗೂ ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಜು.10ರ ಬೆಳಗ್ಗೆ 10.30ಕ್ಕೆ ಶಿಕ್ಷಕರ ಬಡಾವಣೆಯಲ್ಲಿ ಆಯೋಜಿಸಲಾಗಿದೆ.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಗೋಪಿನಾಥ್ ಶಣೈ, ಸಾವಿತ್ರಿ ಗೋಪಿನಾಥ್, ರಾಷ್ಟ್ರೀಯ ಸೇವಾ ಸಂಘದ ರಾಜೇಶ್ ಇನ್ನಿತರರು ಭಾಗಿಯಾಗುವರು ಎಂದು ಟ್ರಸ್ಟ್ ನ ಸಂಸ್ಥಾಪಕ ಹೆಚ್.ಜಿ.ಗಿರಿಧರ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: