ಮೈಸೂರು

ಕುಡಿದ ಮತ್ತಿನಲ್ಲಿ ತನ್ನದೇ ಮನೆಗೆ ಬೆಂಕಿ ಇಟ್ಟ ಭೂಪ

ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿದ ವ್ಯಕ್ತಿಯೊಬ್ಬ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ.

ಮೈಸೂರಿನ ತಿಲಕ್‍ ನಗರದಲ್ಲಿ ಈ ಘಟನೆ ನಡೆದಿದ್ದು, ಮಹದೇವ(32) ಎಂಬಾತ ದಾಂಧಲೆ ನಡೆಸಿದ ವ್ಯಕ್ತಿ. ಬುಧವಾರದಂದು ಮಹದೇವನ ಮನೆಯಲ್ಲಿ ದೇವರ ಪೂಜೆ ಮಾಡಿ ದೀಪಗಳನ್ನು ಉರಿಸಿಡಲಾಗಿತ್ತು. ಮಹದೇವ ದೇವರನ್ನು ನಂಬುತ್ತಿರಲಿಲ್ಲ ಎನ್ನಲಾಗಿದ್ದು, ತಡ ರಾತ್ರಿ ಮನೆಗೆ ಆಗಮಿಸಿದ ವೇಳೆ ದೀಪಗಳು ಉರಿಯುತ್ತಿರುವುದನ್ನು ಗಮನಿಸಿ ಅದೇ ದೀಪಗಳಿಂದ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರಿಗೂ ಅವಾಚ್ಯವಾಗಿ ನಿಂದಿಸಿದ್ದ ಎನ್ನಲಾಗಿದೆ. ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: