ಕರ್ನಾಟಕ

ಮುಂಬರುವ ಶೈಕ್ಷಣಿಕ ಸಾಲಿನಿಂದ 1 ರಿಂದ 10ನೇ ತರಗತಿವರೆಗೆ ಪರಿಷ್ಕೃತ ಪಠ್ಯಕ್ರಮ

ಮುಂಬರುವ ಶೈಕ್ಷಣಿಕ ಸಾಲಿನಿಂದ 1 ರಿಂದ 10ನೇ ತರಗತಿಯವರೆಗೆ ಹೊಸ ಪರಿಷ್ಕೃತ ಪಠ್ಯಕ್ರಮ ಜಾರಿಯಾಗಲಿದೆ ಎಂದು ಪಠ್ಯಕ್ರಮ ಪರಿಷ್ಕೃತ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

2017-18ನೇ ಶೈಕ್ಷಣಿಕ ವರ್ಷದಿಂದಲೇ ಹೊಸ ಪಠ್ಯಕ್ರಮ ಜಾರಿಗೆಯಾಗಲಿದ್ದು ಈಗಾಗಲೇ ಪೂರ್ವ ತಯಾರಿಯ ಮುಕ್ತಾಯ ಹಂತದಲ್ಲಿದೆ. ಪಠ್ಯಪುಸ್ತಕ ಯಾವುದೇ ಪಕ್ಷದ ಮುಖವಾಣಿಯಾಗಬಾರದು ಎನ್ನುವ ವಿಷಯವನ್ನು ಮನಗಂಡು ಪಠ್ಯಪುಸ್ತಕವನ್ನು ಪರಿಷ್ಕೃತಗೊಳಿಸಲಾಗಿದೆ. ಪ್ರಸ್ತುತ ಪಠ್ಯದಲ್ಲಿದ್ದ ಸಾಮಾಜಿಕ, ಮಹಿಳಾ, ಶೈಕ್ಷಣಿಕ, ಆರ್ಥಿಕ, ನ್ಯಾಯ ಸೇರಿದಂತೆ ವಿವಿಧ ಕ್ಷೇತ್ರಗಳ ಲೋಪದೋಷಗಳನ್ನು ಸರಿಪಡಿಸಿ ಬದಲಾವಣೆ ಮಾಡಬೇಕೆಂಬುದನ್ನು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಅದರಂತೆ ಪರಿಷ್ಕೃತಗೊಳಿಸಲಾಗಿದೆ ಎಂದರು.

ಪರಿಷ್ಕೃತ ಪಠ್ಯಪುಸ್ತಕದಲ್ಲಿ ಕೌಶಲ್ಯಾಧಾರಿತ ಚಟುವಟಿಕೆಗಳನ್ನು ಅಳವಡಿಸಲು ಕೋರಲಾಗಿದೆ. ಈಗಾಗಲೇ ಗಣಿತ, ಸಮಾಜವಿಜ್ಞಾನ ಹಾಗೂ ವಿಜ್ಞಾನ ಪಠ್ಯಪುಸ್ತಕಗಳು ಪರಿಷ್ಕೃತವೂ ಶೇ.20ರಷ್ಟು ಮುಗಿದಿದೆ. ಉಳಿದ ವಿಷಯಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಶೈಕ್ಷಣಿಕ ವರ್ಷ ಆರಂಭದೊಳಗೆ ನೂತನ ಪರಿಷ್ಕೃತ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ, ಈ ಸಂಬಂಧ ರಾಜ್ಯ ಸರ್ಕಾರ 27 ಸಮಿತಿಗಳನ್ನು ರಚಿಸಿದ್ದು ಸಮಿತಿಯ ಹಿರಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಉಳಿದ ಸಮಿತಿಗಳಲ್ಲೂ ಒಬೊಬ್ಬ ಅಧ್ಯಕ್ಷರಿರುವರು ಎಂದು ತಿಳಿಸಿದರು.

Leave a Reply

comments

Related Articles

error: