ಪ್ರಮುಖ ಸುದ್ದಿಮೈಸೂರು

ಅರಮನೆಗೆ ತೆರಳಿ ಯದುವೀರ್ ಅವರಿಗೆ ಕೇಂದ್ರ ಸರ್ಕಾರದ ಸಾಧನೆಯ ಪುಸ್ತಕ ನೀಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು,ಜು.7:-  ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಸದ  ಪ್ರತಾಪ್ ಸಿಂಹ ತಂದ ಅನುದಾನಗಳನ್ನು ಬಿಂಬಿಸುವ ಹಾಗೂ ಕೇಂದ್ರ ಸರ್ಕಾರದ ಸಾಧನೆ ವಿವರಿಸುವ ಸಮಗ್ರ ಪುಸ್ತಕವನ್ನು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರಿಗಿಂದು ಸಂಸದ ಪ್ರತಾಪ್ ಸಿಂಹ ನೀಡಿದರು.

ಮೈಸೂರಿನ ಅರಮನೆಗೆ ತೆರಳಿದ ಪ್ರತಾಪ್ ಸಿಂಹ ಯದುವೀರ್ ಅವರಿಗೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಮನವರಿಕೆ ಮಾಡಿಕೊಟ್ಟರು. ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂದು ಕೇಳಿಕೊಂಡರು. ಕೇಂದ್ರ ಸರ್ಕಾರಕ್ಕೆ 5ವರ್ಷ ಸಾಕಾಗಲ್ಲ. ನರೇಂದ್ರ ಮೋದಿ ಅವರಿಗೆ ಅಭಿವೃದ್ಧಿ ಕಾರ್ಯಮಾಡಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದರು. ಯದುವೀರ್ ಅವರು ಈ ಸಂದರ್ಭ ಕೇಂದ್ರದ ಬಿಜೆಪಿ ಸರ್ಕಾರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಬಿಜೆಪಿಯ ಪ್ರಮುಖರು ಸಂಸದರ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: