ಮೈಸೂರು

ಅಜಾಗರೂಕತೆ ಚಾಲನೆ : ವಾಹನ ಢಿಕ್ಕಿ

ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಪರಿಣಾಮ ಎರಡು ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಮೈಸೂರಿನಲ್ಲಿ ಬುಧವಾರ ವರದಿಯಾಗಿದೆ.

ಬುಧವಾರ ಸಂಜೆ, ಗಂಗೋತ್ರಿ ಬಡಾವಣೆ ನಿವಾಸಿ ರಾಮಕೃಷ್ಣ ಅವರ ಕೆಎ14 ಎನ್ 2612 ವ್ಯಾಗನಾರ್ ಕಾರಿನಲ್ಲಿ ಕುಟುಂಬ ಸಮೇತರಾಗಿ ಶ್ರೀರಂಗಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ನಗರದ ಜೆಎಲ್‍ಬಿ ರಸ್ತೆಯ ರೋಟರಿ ಶಾಲೆ ಸರ್ಕಲ್ ಬಳಿ ಕೆವಿಸಿ ಹೋಟೆಲ್ ಕಡೆಯಿಂದ ವೇಗವಾಗಿ ಬಂದ ಕೆಎ09 ಪಿ7438 ನಂಬರಿನ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ.

ಸ್ವಿಫ್ಟ್ ಕಾರು ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಮುಂದಿನ ಸಿಗ್ನಲ್‍ ಲೈಟ್‍ ಕಂಬಕ್ಕೆ ಗುದ್ದಿದೆ. ಇದರಿಂದ ಸ್ವಿಫ್ಟ್ ಕಾರಿನ ಮುಂಭಾಗ ಮತ್ತು ಎಡಭಾಗ ಸಂಪೂರ್ಣ ಜಖಂಗೊಂಡಿದೆ. ಸ್ವಿಫ್ಟ್ ಕಾರಿನ ಹೊಡೆತಕ್ಕೆ ವ್ಯಾಗನಾರ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಿಂದ ಸ್ವಿಫ್ಟ್ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Leave a Reply

comments

Tags

Related Articles

error: