
ಮೈಸೂರು
ವಿಚಾರಣೆಗಾಗಿ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದ ಪಾಲಿಕೆಯ ಮಾಜಿ ಸದಸ್ಯ ಸಿ.ಮಾದೇಶ
ಮೈಸೂರು,ಜು.7:- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಲಿಕೆಯ ಮಾಜಿ ಸದಸ್ಯ ಅವ್ವ ಮಾದೇಶ್ ಅಲಿಯಾಸ್ ಸಿ.ಮಾದೇಶ ಇಂದು ವಿಚಾರಣೆಗಾಗಿ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದರು.
ಹಿಂದೊಮ್ಮೆ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾದ ವೇಳೆ ಕರ್ತವ್ಯದಲ್ಲಿದ್ದ ಇನ್ಸಪೆಕ್ಟರ್ ಓರ್ವರ ಮೇಲೆ ದರ್ಪ ತೋರಿ, ಅವಾಚ್ಯ ಶಬ್ದದಿಂದ ನಿಂದಿಸಿದ ಹಿನ್ನೆಲೆಯಲ್ಲಿ ಇನ್ಸಪೆಕ್ಟರ್ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ಇಂದು ಅವ್ವ ಮಾದೇಶ್ ಮತ್ತು ಸಹೋದರ ಮಂಜು ಮೈಸೂರು ನ್ಯಾಯಾಲಯಕ್ಕೆ ಹಾಜರಾದರು. ಅವ್ವ ಮಾದೇಶ್ ಅವರನ್ನು ನೋಡಲು ಅವರ ಬೆಂಬಲಿಗರು ಹಾಜರಿದ್ದ ಕಾರಣ ಪೊಲೀಸರು ಬಿಗು ಬಂದೋಬಸ್ತ್ ನಲ್ಲಿ ಅವರನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು. (ಕೆ.ಎಸ್,ಎಸ್.ಎಚ್)