ಪ್ರಮುಖ ಸುದ್ದಿ

ಒಕ್ಕಲಿಗರಿಗೆ ಶೇ.32 ಲಾಭ ಸಿಕ್ಕಿದೆ ಅಂತಾ ಲೆಕ್ಕ ಹಾಕಿದ್ದು, ಯಾರು? : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾಗ್ದಾಳಿ

ರಾಜ್ಯ(ಬೆಂಗಳೂರು)ಜು.7:- ಬಜೆಟ್‍ನಲ್ಲಿ ಒಕ್ಕಲಿಗರಿಗೆ ಶೇ.32ರಷ್ಟು ಲಾಭ ಸಿಕ್ಕಿದೆ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಒಕ್ಕಲಿಗರಿಗೆ ಶೇ.32 ಲಾಭ ಸಿಕ್ಕಿದೆ ಎಂದು ಲೆಕ್ಕ ಹಾಕಿದ್ದು, ಯಾರು? ಇದೆಲ್ಲಾ ಸೆನ್ಸ್ ಲೆಸ್ ರಿಪೋರ್ಟ್ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ  ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಬಜೆಟ್ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ಬಜೆಟ್ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತದೆ. ಅಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರಿಸಲಿದ್ದಾರೆ ಎಂದು ಹೇಳಿದರು. ಉತ್ತರ ಕರ್ನಾಟಕ ಏನು ಅಂತ ನನಗೆ ಗೊತ್ತು. ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಪ್ರಶ್ನೆಗಳಿಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾರೆ. ಹಳೆ ಮೈಸೂರು ಭಾಗದಲ್ಲಿ ಇರೋದು ಕೇವಲ ನಾಲ್ಕೈದು ಜಿಲ್ಲೆಗಳು ಮಾತ್ರ. ಮಂಗಳೂರು, ಬೀದರ್‍ನಲ್ಲಿಯೂ ಒಕ್ಕಲಿಗರು ಇದ್ದಾರೆ. ಕರ್ನಾಟಕದ ಎಲ್ಲ ಭಾಗದವರಿಗೂ ಬಜೆಟ್‍ನಲ್ಲಿ ಲಾಭ ಸಿಗಲಿದೆ. ಒಕ್ಕಲಿಗರಿಗೆ ಶೇ.32 ಲಾಭ ಸಿಕ್ಕಿದೆ ಎಂದು ಲೆಕ್ಕ ಹಾಕಿದ್ದು, ಯಾರು? ಇದೆಲ್ಲಾ ಸೆನ್ಸ್ ಲೆಸ್ ರಿಪೋರ್ಟ್ ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: