ಸುದ್ದಿ ಸಂಕ್ಷಿಪ್ತ
ತ್ಯಾಗರಾಜ ಸಂಗೀತ ಸಭಾ : ಜುಲೈ ಮಾಹೆಯ ಕಾರ್ಯಕ್ರಮ
ಮೈಸೂರು,ಜು.7 : ವಿವಿ ಪುರಂನ ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಜುಲೈ ಮಾಹೆಯ ಸಂಗೀತ ಕಾರ್ಯಕ್ರಮದ ಪಟ್ಟಿ ಇಂತಿದೆ.
ಜು.11ರ ಸಂಜೆ 6ಕ್ಕೆ ವಿದುಷಿ ಶಾರದಾಂಬ ಅವರಿಂದ ಗಾಯನ, ಪೃಥ್ವಿ ಭಾಸ್ಕರ್ ಪಿಟೀಲು, ವಿದ್ವಾನ್ ವಾದಿರಾಜ್ ಅವರಿಂದ ಮೃದಂಗ, ನಂತರ 7.15ಕ್ಕೆ ಅನನ್ಯ ಅವರಿಂದ ಗಾಯನವನ್ನು ವಿವೇಕಾನಂದ ನಗರದ ಬ್ರಾಹ್ಮಣ ಸಭೆಯ ಶಂಕರ ಪ್ರಾರ್ಥನಾ ಮಂದಿರ,ಶ್ರೀಲಕ್ಷ್ಮೀನರಸಿಂಹ ದೇವಸ್ಥಾನ, ಶ್ರೀರಾಂಪುರ ಇಲ್ಲಿ ಆಯೋಜಿಸಲಾಗಿದೆ.
ಜ.18 ಸಂಜೆ 6.30ಕ್ಕೆ ಜಯನಗರದ ಶ್ರೀರಾಮ ಮಂದಿರ ಸಭಾಂಗಣದಲ್ಲಿ ವಿದ್ವಾನ್ ಕೋಟಿಲಡಿ ಕಲಾವಿದರಿಂದ ಗಾಯನ ಕಾರ್ಯಕ್ರಮ ನಡೆಯುವುದು. (ಕೆ.ಎಂ.ಆರ್)